ಬೆಂಗಳೂರು: ಪಿಯುಸಿ ಪರೀಕ್ಷೆ 3 ರ ಫಲಿತಾಂಶ ಮಂಗಳವಾರ (ಜುಲೈ 16 ರಂದು) ಮಧ್ಯಾಹ್ನ 3:00 ಗಂಟೆಗೆ ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ. ಪ್ರಕಟಣೆಯಲ್ಲಿ ಈ ಬಗ್ಗೆ ತಿಳಿಸಿರುವ ಮಂಡಳಿ, ಜೂನ್ 24 ರಿಂದ ಜುಲೈ 5 ರವರೆಗೆ ಪರೀಕ್ಷೆ ನಡೆದಿದೆ. ಫಲಿತಾಂಶವನ್ನು ಅಧಿಕೃತ ಜಾಲತಾಣ karresults.nic.in ದಲ್ಲಿ ನೋಡಬಹುದು ಎಂದು ತಿಳಿಸಿದೆ.
ಮಂಗಳವಾರ : ಪಿಯುಸಿ ಪರೀಕ್ಷೆ-3 ರ ಫಲಿತಾಂಶ ಪ್ರಕಟ
