ಬೆಳಗಾವಿ: ತಿಂಗಳ ಅವಧಿಯಲ್ಲಿ ಯಮಕನಮರಡಿ CPI ಆಗಿ ನೇಮಕಗೊಂಡಿರುವ ಜಾವೇದ್ ಮುಶಾಪುರಿ ಅವರು ಅವರು ಈಗ ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಇತಿಹಾಸ ಬರೆದಿದ್ದಾರೆ.
ಜನಸ್ನೇಹಿ ಅಧಿಕಾರಿ ಎಂದೇ ಗುರುತಿಸಿಕೊಂಡಿರುವ ಜಾವೇದ್ ಮುಶಾಪುರಿ ಅವರು ಈ ಬಾರಿ ಗಣೇಶ ಮೂರ್ತಿಕಾರರ ಬಳಿ ಹೋಗಿ ಗಣಪತಿ ಮೂರ್ತಿಯನ್ನು ತಂದು ಕುಳ್ಳಿರಿಸಿದ್ದಾರೆ. ಈ ಮೂಲಕ ತಾವು ಮತ್ತೊಮ್ಮೆ ಜನಸ್ನೇಹಿ ಅಧಿಕಾರಿ ಎಂದು ಜನರಿಂದ ಗುರುತಿಸುವ ಕೆಲಸ ಮಾಡಿದ್ದಾರೆ. ಒಟ್ಟಾರೆ ಇದೀಗ ಜಾವೇದ್ ಮುಶಾಪುರಿಯವರ ನಡೆಗೆ ಸಾರ್ವಜನಿಕರಿಂದ ಹಾಗೂ ಗಣಪತಿ ಉತ್ಸವ ಮಂಡಳಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.