ಬೆಳಗಾವಿ: ಪತ್ನಿ ಮೇಲೆ ಪಿಎಸ್ಐ ಒಬ್ಬರು ಹಲ್ಲೆ ನಡೆಸಿದ ಆರೋಪ ಬೆಳಗಾವಿಯಲ್ಲಿ ಈಗ ಕೇಳಿ ಬಂದಿದೆ. ಈ ಸಂಬಂಧ ಪಿಎಸ್ಐ ಪತ್ನಿ ಇದೀಗ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಪಿಎಸ್ಐ ಅವರ ಪತ್ನಿ, ಯುವತಿ ಜೊತೆ ಸಂಬಂಧ ಹೊಂದಿರುವ ಬಗ್ಗೆ ಪಿಎಸ್ ಐ ಅಗಿರುವ ಪತಿಗೆ ಪ್ರಶ್ನೆ ಎತ್ತಿದ್ದಾರೆ. ಈ ಕಾರಣಕ್ಕೆ ಪಿಎಸ್ಐ ಪತ್ನಿ ಮೇಲೆ ಹಲ್ಲೆ ನಡೆಸಿದ್ದು ಅವರ ಕಣ್ಣು, ಕುತ್ತಿಗೆಗೆ ಗಾಯವಾಗಿದೆ.
ಪತ್ನಿ ಮೇಲೆ ಹಲ್ಲೆಗೆ ಮುಂದಾದ್ರಾ ಪಿಎಸ್ಐ ?
