ಪುಣೆ :
ಗಡಿ ವಿವಾದದ ಕುರಿತು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗಳನ್ನು ವಿರೋಧಿಸಿ ಮರಾಠಾ ಮಹಾಸಂಘದ ಸದಸ್ಯರು ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ಬಸ್ಗೆ ಕಪ್ಪು ಬಣ್ಣ ಬಳಿದಿದ್ದಾರೆ.
ಪುಣೆ ಜಿಲ್ಲೆಯ ದೌಂಡ್ನಲ್ಲಿ ನಿಪ್ಪಾಣಿ-ಔರಂಗಾಬಾದ್ ಬಸ್ನಲ್ಲಿ ಜೈ ಮಹಾರಾಷ್ಟ್ರ ಮತ್ತು ಜಾಹಿರ್ ನಿಷೇಧ್ (ಖಂಡನೆ) ಪದಗಳನ್ನು ಕಿತ್ತಳೆ ಮತ್ತು ಕಪ್ಪು ಬಣ್ಣದಲ್ಲಿ ಬರೆಯಲಾಗಿದೆ ಎಂದು ಅದರ ಸದಸ್ಯರೊಬ್ಬರು ತಿಳಿಸಿದ್ದಾರೆ. ಅವರು ಕರ್ನಾಟಕದ ಮುಖ್ಯಮಂತ್ರಿ ವಿರುದ್ಧವೂ ಘೋಷಣೆ ಕೂಗಿದರು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕೆಲವು ಗ್ರಾಮ ಪಂಚಾಯತಿಗಳು ತೀವ್ರ ನೀರಿನ ಸಮಸ್ಯೆ ಎದುರಿಸುತ್ತಿರುವಾಗ ಕರ್ನಾಟಕದೊಂದಿಗೆ ವಿಲೀನಗೊಳಿಸಲು ಈ ಹಿಂದೆ ನಿರ್ಣಯವನ್ನು ಅಂಗೀಕರಿಸಿದ್ದವು ಎಂದು ಬೊಮ್ಮಾಯಿ ಮಂಗಳವಾರ ಪ್ರತಿಪಾದಿಸಿದ್ದರು.
ಮಹಾ ಕಿತಾಪತಿ ; ಕರ್ನಾಟಕ ಸಾರಿಗೆ ಬಸ್ಗೆ ಕಪ್ಪು ಮಸಿ ಬಳಿದ ಪ್ರತಿಭಟನಾಕಾರರು
