ಬೆಳಗಾವಿ :
ಕೆ.ಎಲ್.ಇ. ಅಕಾಡೆಮಿ ಆಫ್ ಹೈಯರ್ ಎಜುಕೇಶನ್ & ರೀಸರ್ಚ (ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯ) ಬೆಳಗಾವಿಯ ಕೌನ್ಸಿಲಿಂಗ್ ಸೆಲ್ ಮತ್ತು ಮನೋವಿಜ್ಞಾನ ವಿಭಾಗ ಜೆ.ಎನ್.ಎಮ್.ಸಿ ವತಿಯಿಂದ ಮಹಿಳಾ ಕಲ್ಯಾಣ ಸಂಸ್ಥೆಯ (ಡಬ್ಲು,ಡಬ್ಲು,ಎಸ್) ಉಜ್ವಲ ಪುನರ್ವಸತಿ ಕೇಂದ್ರ್ರದಲ್ಲಿ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಅದರಲ್ಲಿ ಸಾಮಾಜಿಕ ಸಂತ್ರಸ್ತ ಮಕ್ಕಳು, ವೃಧ್ದರು ಹಾಗೂ ಮಹಿಳೆಯರಿಗಾಗಿ ಉಚಿತ ಮಾನಸಿಕ ಆರೋಗ್ಯ ತಪಾಸಣೆ, ಆರೋಗ್ಯ ತಪಾಸಣೆ & ಮಾನಸಿಕ ಆಪ್ತಸಮಾಲೋಚನೆ ಸೆವೆಯನ್ನು ಒದಗಿಸಲಾಯಿತು.
ಕೆ.ಎಲ್.ಇ. ಸ್ವಾಯತ್ತ ವಿಶ್ವವಿದ್ಯಾಲಯದ ಆಪ್ತಸಮಾಲೋಚಕರು ಹಾಗೂ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಯಾಸ್ಮಿನ್ ಡಿ.ಎನ್. ಅವರು “ಮಾನಸಿಕ ಆರೋಗ್ಯ ಮತ್ತು ಅದರ ನಿರ್ವಹಣೆ ಎಲ್ಲರಿಗೂ ಆರೋಗ್ಯ” ದ ಬಗ್ಗೆ ಮಾತನಾಡಿದರು.
ಶ್ರೀಮತಿ ಸುರೇಖಾ (ಡಬ್ಲು,ಡಬ್ಲು,ಎಸ್) & ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಸಮಾಜ ಸೇವೆ ಹಾಗು ಮಹಿಳಾ ಹಾಗೂ ಮಕ್ಕಳ ಆರೋಗ್ಯ ಹಾಗೂ ಅಭಿವ್ರಧ್ದಿಯ ನಿಟ್ಟಿನಲ್ಲಿ ೭೦ ಕ್ಕೂ ಹೆಚ್ಚು ಜನರಿಗೆ ಮಾನಸಿಕ ಆರೋಗ್ಗದ ಕುರಿತು ಸೇವೆಯನ್ನು ಒದಗಿಸಲಾಯಿತು.
ಮನೋವಿಜ್ಞಾನ ವಿಭಾಗದ ಸಿಬ್ಬಂಧಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು, ಕಮ್ಯೂನಿಟಿ ಮೆಡಿಸಿನ್ ಜೆ.ಎನ್.ಎಮ್.ಸಿ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.