ಬೆಳಗಾವಿ :
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ನೂತನ ಕುಲಪತಿಯಾಗಿ ಪ್ರೊ ವಿದ್ಯಾಶಂಕರ್ ಎಸ್.
ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಕುಲಪತಿಗಳಾಗಿದ್ದ ಪ್ರೊ. ಕರಿಸಿದ್ದಪ್ಪ ಅವರ ಅಧಿಕಾರ ಅವಧಿ ದಿನಾಂಕ ಸೆ.25 ರಂದು
ಮುಕ್ತಾಯಗೊಂಡ ಹಿನ್ನಲೆಯಲ್ಲಿ ಹೊಸ ಕುಲಪತಿಗಳ ನೇಮಕ ಪ್ರಕ್ರಿಯೆ ನಡೆದಿದ್ದರಿಂದ ಮುಂದಿನ ಒಂದು ತಿಂಗಳ ಅವಧಿಗೆ ಅಥವಾ ಹೊಸ ಕುಲಪತಿಗಳ ಆಯ್ಕೆಯಾಗುವವರೆಗೆ ಮುಂದುವರೆಯುವಂತೆ ವಿಟಿಯು ಕುಲಾಧಿಪತಿಗಳ ಆಗಿರುವ ರಾಜ್ಯದ ರಾಜ್ಯಪಾಲರು ಸೆ.23 ರಂದು ಆದೇಶಿಸಿದ್ದರು.
ಪ್ರಸ್ತುತ ಕುಲಪತಿಗಳ ನೇಮಕ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯಪಾಲರು ಗುರುವಾರ ಕೆ ಎಸ್ ಓ ಯು ನ ಕುಲಪತಿಗಳಾಗಿದ್ದ ಪ್ರೊ. ವಿದ್ಯಾಶಂಕರ ಎಸ್. ಅವರನ್ನು ಮುಂದಿನ ಮೂರು ವರ್ಷಗಳವರೆಗೆ ವಿ ಟಿ ಯು ಕುಲಪತಿಗಳನ್ನಾಗಿ ನೇಮಿಸಿ ಆದೇಶ ಹೊರಡಿಸಿದ್ದರು. ಈ ಹಿನ್ನಲೆಯಲ್ಲಿ ಪ್ರೊ ವಿದ್ಯಾಶಂಕರ ಎಸ್. ಅವರು ಅವರು ತಮ್ಮ ಧರ್ಮಪತ್ನಿ ಜ್ಯೋತಿ ವಿದ್ಯಾಶಂಕರ ಹಾಗೂ ಅವರ ಸ್ನೇಹ ಬಳಗ ಉಪಸ್ಥಿತಿಯಲ್ಲಿ ವಿ ಟಿ ಯು ಕುಲಪತಿಗಳಾಗಿ ಶುಕ್ರವಾರ ಬೆಳಿಗ್ಗೆ ಅಧಿಕಾರ ಸ್ವೀಕಾರ ಮಾಡಿದರು. ಕುಲಪತಿ ಪ್ರೊ. ಕರಿಸಿದ್ದಪ ಅವರು ಪ್ರೊ. ವಿದ್ಯಾಶಂಕರ ಅವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಅಪರಾಹ್ನ ನಡೆದ ಸರಳ ಸಮಾರಂಭದಲ್ಲಿ ಪ್ರೊ. ವಿದ್ಯಾಶಂಕರ ಎಸ್ ಅವರಿಗೆ ಆತ್ಮೀಯವಾಗಿ ಸ್ವಾಗತವನ್ನು ಕೋರಿ ಪ್ರೊ. ಕರಿಸಿದ್ದಪ್ಪ ಅವರಿಗೆ ಬೀಳ್ಕೊಡಲಾಯಿತು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ. ಎಸ್. ಎಸ್.ದೇಶಪಾಂಡೆ, ಪ್ರೊ. ರಂಗಸ್ವಾಮಿ, ಹಣಕಾಸು ಅಧಿಕಾರಿ ಎಂ. ಎ. ಸಪ್ನಾ ಹಾಗೂ ವಿಟಿಯು ಸಿಬ್ಬಂದಿ ಉಪಸ್ಥಿತರಿದ್ದರು.