ಮೈಸೂರು :
ಕಾಂಗ್ರೆಸ್ ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಜತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೈಸೂರಿನ ಪ್ರಸಿದ್ಧ ಮೈಲಾರಿ ಹೋಟೆಲ್ನಲ್ಲಿ ಬುಧವಾರ ದೋಸೆ ಸವಿದರು. ಈ ಸಂದರ್ಭದಲ್ಲಿ ಪ್ರಿಯಾಂಕಾ ವಾದ್ರಾ ಅವರು ಮಕ್ಕಳ ಜತೆ ಒಡನಾಡಿದರು.
ನಂತರ ಅಡುಗೆ ಮನೆಗೆ ಧಾವಿಸಿದ ಅವರು ತವಾ ಮೇಲೆ ದೋಸೆ ಹಾಕಿದ್ದಾರೆ. ನಂತರ ಮಾತನಾಡಿದ ಅವರು ನಾನಿಲ್ಲಿ ಇಡ್ಲಿ ದೋಸೆ ಸವಿದಿದ್ದೇನೆ. ಬಹಳ ರುಚಿಕರವಾಗಿತ್ತು. ಇದನ್ನು ಮನೆಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಂಡಿದ್ದೇನೆ. ನಾನು ಇದನ್ನು ಮನೆಯಲ್ಲೂ ಮಾಡುತ್ತೇನೆ ಎಂದು ಹೇಳಿದರು.