ದೆಹಲಿ :
ಪ್ರಧಾನಿ ನರೇಂದ್ರ ಮೋದಿ
ಹುಬ್ಬಳ್ಳಿಯಲ್ಲಿ ಜನವರಿ 12 ರಂದು ನಡೆಯುತ್ತಿರುವ 26ನೇ ಯುವಜನೋತ್ಸವ-2023 ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅವರು ಪಾಲ್ಗೊಳ್ಳುತ್ತಿರುವ ನಿಮಿತ್ತ ನಗರದಲ್ಲಿ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಹಾಗೂ ಪಾರ್ಕಿಂಗ್ ಸ್ಥಳ ನಿಗದಿಪಡಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಪ್ರವಾಸ ಕೈಗೊಳ್ಳಲಿದ್ದಾರೆ.
ವಿಧಾನಸಭಾ ಚುನಾವಣೆಗೆ ರಣತಂತ್ರ ನಡೆಯುತ್ತಿರುವ ಬಿಜೆಪಿ ಇದೀಗ ಕರ್ನಾಟಕ ಪ್ರವಾಸಕ್ಕೆ ತನ್ನ ಘಟಾನುಘಟಿ ನಾಯಕರನ್ನು ಕರೆಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಈ ಪ್ರಭಾವಿ ನಾಯಕರನ್ನು ರಾಜ್ಯಕ್ಕೆ ಕರೆಸಿಕೊಳ್ಳುವ ಮೂಲಕ ಬಿರುಸಿನ ಪ್ರಚಾರಕ್ಕೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿ ಜನವರಿ 12 ಕ್ಕೆ ಹುಬ್ಬಳ್ಳಿ ಹಾಗೂ 19 ಕ್ಕೆ ಕಲಬುರ್ಗಿಗೆ ಭೇಟಿ ನೀಡಲಿದ್ದಾರೆ. ಈ ತಿಂಗಳ ಮೂರನೇ ವಾರ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದು , ರಾಜ್ಯ ನಾಯಕರ ಜೊತೆ ವಿಶೇಷ ಸಭೆ ನಡೆಸುವ ಬಗ್ಗೆ ವರದಿಯಾಗಿದೆ. ಕೊನೆಯ ವಾರ ಜ. 29 ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಬೆಂಕಿ ಚೆಂಡು ಎಂದೇ ಖ್ಯಾತರಾಗಿರುವ ಯೋಗಿ ಆದಿತ್ಯನಾಥ್ ಬೆಂಗಳೂರಿಗೆ ಆಗಮಿಸಿ ಹಲವು ಉದ್ಘಾಟನಾ ಕಾರ್ಯಗಳಲ್ಲಿ ಭಾಗಿಯಾಗಲಿದ್ದಾರೆ.
ಈ ಮೂವರು ನಾಯಕರಲ್ಲದೆ ಬಿಜೆಪಿಯ ಪ್ರಭಾವಿ ಕೇಂದ್ರ ನಾಯಕರು ಕರ್ನಾಟಕದ ಪ್ರವಾಸ ಕೈಗೊಳ್ಳಲಿದ್ದಾರೆ. ಒಟ್ಟಾರೆ, ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಆಡಳಿತವನ್ನು ಪ್ರತಿಷ್ಠಾಪಿಸಲು ಕಮಲ ನಾಯಕರು
ರಾಜ್ಯಕ್ಕೆ ಆಗಮಿಸಿ ತಮ್ಮ ಪಕ್ಷದ ಪರ ಜನರಲ್ಲಿ ಒಲವು ಮೂಡಿಸಲು ಪ್ರಚಾರ ನಡೆಸಲಿದ್ದಾರೆ.