ದೆಹಲಿ:
ಮೆಟಾ ಒಡೆತನದ ವಾಟ್ಸ್ಆ್ಯಪ್ ಹೊಸದಾಗಿ ಪರಿಚಯಿಸಿರುವ ವಾಟ್ಸ್ಆ್ಯಪ್ ಚಾನೆಲ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಂದೇ ವಾರದಲ್ಲಿ 50 ಲಕ್ಷ (5 ಮಿಲಿಯನ್) ಫಾಲೋವರ್ಸ್ಗಳಾಗಿದ್ದಾರೆ.
ಸೆ.20ರಂದು ಆರಂಭಿಸಲಾದ ಪ್ರಧಾನಿ ಮೋದಿ ಅವರ ವಾಟ್ಸ್ಆ್ಯಪ್ ಚಾನೆಲ್ ಒಂದೇ ದಿನದಲ್ಲಿ ಒಂದು ಲಕ್ಷ ಫಾಲೋವರ್ಸ್ ಹೊಂದುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿತ್ತು. ಅಲ್ಲದೆ ಅವರ ಮೊದಲ ಪೋಸ್ಟ್ಗೆ ಒಂದೇ ನಿಮಿಷದಲ್ಲಿ ನೂರಾರು ಪ್ರತಿಕ್ರಿಯೆಗಳು ಬಂದಿದ್ದವು.
ಸದ್ಯ 5 ಲಕ್ಷ ಫಾಲೋವರ್ಸ್ ಆದ ಬಗ್ಗೆ ಚಾನೆಲ್ನಲ್ಲಿ ಮೋದಿ ಅವರು ಪೋಸ್ಟ್ ಹಂಚಿಕೊಂಡಿದ್ದು, ‘ನಾವು 50 ಲಕ್ಷಕ್ಕೂ ಹೆಚ್ಚು ಸಮುದಾಯವಾಗಿರುವುದರಿಂದ, ನನ್ನ ವಾಟ್ಸ್ಆ್ಯಪ್ ಚಾನೆಲ್ ಮೂಲಕ ನನ್ನೊಂದಿಗೆ ಸಂಪರ್ಕ ಹೊಂದಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ! ನಿಮ್ಮ ಪ್ರತಿಯೊಬ್ಬರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹಕ್ಕೆ ಕೃತಜ್ಞನಾಗಿರುತ್ತೇನೆ‘ ಎಂದಿದ್ದಾರೆ.