ವಾಷಿಂಗ್ಟನ್ :
ಭಾರತದ ಪ್ರಧಾನಿ ನರೇಂದ್ರ ಮೋದಿ ದೂರದೃಷ್ಟಿ ಹೊಂದಿರುವ ಅತ್ಯಂತ ಜನಪ್ರಿಯ ವಿಶ್ವ ನಾಯಕ. ಅವರು ತಾಂತ್ರಿಕತೆ ಕುರಿತು ಅಪಾರ ಜ್ಞಾನ ಹೊಂದಿದ್ದಾರೆ ಎಂದು ಅಮೆರಿಕದ ವಾಣಿಜ್ಯ ಸಚಿವೆ ಗೀನಾ ರೈಮಂಡೋ ವ್ಯಕ್ತಪಡಿಸಿದ್ದಾರೆ
ಮೋದಿ ಅವರೊಂದಿಗೆ ತಮ್ಮ ಭಾರತ ಪ್ರವಾಸದಲ್ಲಿ ಒಂದೂವರೆ ಗಂಟೆ ಕಾಲ ಸಮಯ ಕಳೆಯುವ ಅದ್ಭುತ ಅವಕಾಶ ಸಿಕ್ಕಿತು. ಅವರು ಅಮೋಘ ದೂರ ದೃಷ್ಟಿ ಹೊಂದಿದವರು. ಭಾರತದ ಜನರೊಂದಿಗೆ ಅವರ ಬದ್ಧತೆಯ ಮಟ್ಟ ಅವರ್ಣನೀಯ. ಬಡತನದಿಂದ ಜನರನ್ನು ಮೇಲೆತ್ತುವ ಮತ್ತು ಜಾಗತಿಕ ಶಕ್ತಿಯಾಗಿ ಭಾರತವನ್ನು ಮುನ್ನಡೆಸುವ ಬಯಕೆ ನೈಜವಾಗಿದೆ ಹಾಗೂ ಪ್ರಗತಿಯಲ್ಲಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.