ಬೆಂಗಳೂರು :
ಪ್ರಧಾನಿ ನರೇಂದ್ರ ಮೋದಿ ಪ್ರಚಾರದ ವೇಳಾಪಟ್ಟಿ ಬಿಡುಗಡೆಯಾಗಿದೆ.
ಏ .29 ರಿಂದ ಮೇ 7 ರವರೆಗೆ ಒಟ್ಟು 6 ದಿನ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ.
ಏ .29 ರಂದು ಬೀದರ್ ಜಿಲ್ಲೆ ಹುಮ್ನಾಬಾದ್ ನಿಂದ ಪ್ರಚಾರ ಆರಂಭಿಸುವ ಪ್ರಧಾನಿ , ಮೇ 7 ರಂದು ಬೆಂಗಳೂರಿನಲ್ಲಿ ತಮ್ಮ ಪ್ರಚಾರ ಅಂತ್ಯಗೊಳಿಸಲಿದ್ದಾರೆ. ಒಟ್ಟು 23 ಕಡೆ ಪ್ರಚಾರ ಸಭೆ , ರ್ಯಾಲಿ , ರೋಡ್ ಶೋ , ಸಾರ್ವಜನಿಕ ಸಭೆಗಳನ್ನು ನಡೆಸಲಿದ್ದಾರೆ . ಒಂದು ದಿನ 3 ಕಡೆ ಮತ್ತು ಉಳಿದ 5 ದಿನ ನಿತ್ಯ 4 ಕಡೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. 50 ಲಕ್ಷ ಕಾರ್ಯಕರ್ತರೊಂದಿಗೆ ಇಂದು ಬೆಳಗ್ಗೆ ಸಂವಾದ ನಡೆಸಲಿದ್ದಾರೆ.