ನವದೆಹಲಿ: ಕ್ಯಾನ್ಸರ್ ನಿಯಂತ್ರಣ ಮಾಡುವ ಔಷಧಿಗೆ ಅತ್ಯಂತ ಕಡಿಮೆ ದರದಲ್ಲಿ ಮಾರುಕಟ್ಟೆಗೆ ಲಭ್ಯವಾಗುವ ಸುದ್ದಿ ಬೆನ್ನಲ್ಲೇ ಇದೀಗ ಇತರ ಔಷಧಿಗಳ ಬೆಲೆ ಇಳಿಕೆಯ ಮಾತು ಕೇಳಿಬಂದಿದೆ.
ಮಧುಮೇಹ (ಶುಗರ್), ರಕ್ತದೊತ್ತಡ (ಬಿ.ಪಿ) ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಬಳಸಲಾಗುವ 100 ಔಷಧಗಳನ್ನು ದರ ನಿಯಂತ್ರಣ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಶೀಘ್ರವೇ ಇವುಗಳ ಬೆಲೆ ಇಳಿಕೆಯಾಗಲಿದೆ. ಹೀಗೆ ದರ ನಿಯಂತ್ರಣ ಪಟ್ಟಿಗೆ ಸೇರ್ಪಡೆಯಾದ ಔಷಧಗಳಲ್ಲಿ ಮಧುಮೇಹ, ರಕ್ತದೊತ್ತಡ, ಆ್ಯಂಟಿಬಯೋಟಿಕ್ಸ್, ಕೆಮ್ಮಿನ ಸಿರಪ್, ಮಾನಸಿಕ ಒತ್ತಡ, ಹಾವು ಕಡಿತ, ಎಚ್ಐವಿ ಸೋಂಕಿತರು ಬಳಸುವ ಔಷಧ, ಥಲಸ್ಸೇಮಿಯಾ ಚಿಕಿತ್ಸೆ ಬಳಸುವ ಔಷಧ, ಅಸ್ತಮಾಕ್ಕೆ ಬಳಸುವ ಔಷಧಗಳು ಸೇರಿವೆ.