ಉಪಸಭಾಪತಿಯಾಗಿ ಎರಡನೇ ಬಾರಿಗೆ ಪ್ರಾಣೇಶ ಎಂ ಕೆ ಆಯ್ಕೆ..!
ಬೆಳಗಾವಿ : ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ 148 ನೇ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ಗೆ ಉಪ ಸಭಾಪತಿ ಆಯ್ಕೆ ನಡೆಯಿತು.
ಮಾಜಿ ಉಪಸಭಾಪತಿ ಧರ್ಮೆಗೌಡ ಅವರ ಅಕಾಲಿದ ನಿಧನದಿಂದಾಗಿ ಖಾಲಿಯಾಗಿದ್ದ ಸ್ಥಾನಕ್ಕೆ ಬಿಜೆಪಿಯಿಂದ ಸದಸ್ಯ ಪ್ರಾಣೇಶ ಎಂ ಕೆ ಹಾಗೂ ಕಾಂಗ್ರೇಸ್ಸಿನಿಂದ ಅರವಿಂದಕುಮಾರ ಅರಳಿ ಅವರರನ್ನು ಚುನಾಯಿಸುವಂತೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಸೂಚಿಸಲಾಗಿತ್ತು.
ಈ ವೇಳೆ ಒಟ್ಟು 65 ಸದಸ್ಯರು ಮತ ಚಲಾಯಿಸಿದರು. 39 ಮತಗಳನ್ನು ಪಡೆದು ಪ್ರಾಣೇಶ ಎಂ ಕೆ ಎರಡನೇ ಬಾರಿಗೆ ಆಯ್ಕೆಯಾದರು.
24 ಮತಗಳನ್ನು ಪಡೆದ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ಕುಮಾರ ಅರಳಿ ಪರಾಭವಗೊಂಡರು.
ಜೆಡಿಎಸ್ ನ ಸದಸ್ಯರು ತಟಸ್ಥವಾಗಿ ಉಳಿದರು.