ಬೆಳಗಾವಿ : ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ 148 ನೇ ಅಧಿವೇಶನದಲ್ಲಿ ಇಂದು ವಿಧಾನ ಪರಿಷತ್ ಗೆ ಉಪ ಸಭಾಪತಿ ಆಯ್ಕೆ ನಡೆಯಿತು.
ಬಿಜೆಪಿಯಿಂದ ಸದಸ್ಯ ಪ್ರಾಣೇಶ ಎಂ ಕೆ ಹಾಗೂ ಕಾಂಗ್ರೇಸ್ಸಿನಿಂದ ಅರವಿಂದಕುಮಾರ ಅರಳಿ ಅವರರನ್ನು ಚುನಾಯಿಸುವಂತೆ ಎರಡು ರಾಷ್ಟ್ರೀಯ ಪಕ್ಷಗಳಿಂದ ಸೂಚಿಸಲಾಗಿತ್ತು.
ಈ ವೇಳೆ ಒಟ್ಟು 65 ಸದಸ್ಯರು ಮತ ಚಲಾಯಿಸಿದರು. 39 ಮತಗಳನ್ನು ಪಡೆದು ಪ್ರಾಣೇಶ ಎಂ ಕೆ ಎರಡನೇ ಬಾರಿಗೆ ಆಯ್ಕೆಯಾದರು.
24 ಮತಗಳನ್ನು ಪಡೆದ ಕಾಂಗ್ರೇಸ್ ಅಭ್ಯರ್ಥಿ ಅರವಿಂದ ಕುಮಾರ ಅರಳಿ ಪರಾಭವಗೊಂಡರು.
ಜೆಡಿಎಸ್ ನ ಇಬ್ಬರು ಸದಸ್ಯರು ತಟಸ್ಥವಾಗಿ ಉಳಿದರು.