ಬೆಳಗಾವಿ : ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗ್ರಹದಿಂದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 14 ನೇ ಆರೋಪಿ ಇಂದು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಡುಗಡೆಗೊಂಡಿದ್ದಾನೆ. ಇನ್ನು ಮುಂದೆ ಆತ ಬೆಂಗಳೂರು ಜೈಲಿನಲ್ಲಿ ಇರಲಿದ್ದು ಬೆಳಗಾವಿ ಪೊಲೀಸರು ಆತನನ್ನು ಬೆಂಗಳೂರು ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ. ಬೆಳಗಾವಿ ಜೈಲಿನಲ್ಲಿ 44 ದಿನ ಕಳೆದಿದ್ದ. ಯಾವುದೇ ಕಾರಣಕ್ಕೂ ಹಿಂಡಲಗಾ ಜೈಲಿಗೆ ನನ್ನನ್ನು ಕಳಿಸಬೇಡಿ ಎಂದು ಆತ ಮನವಿ ಮಾಡಿಕೊಂಡಿದ್ದ. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಆತನನ್ನು ಮತ್ತೆ ಬೆಂಗಳೂರು ಜೈಲಿಗೆ ರವಾನಿಸಿದೆ.
ಬೆಳಗಾವಿ ಜೈಲಿನಿಂದ ಪ್ರದೂಷ್ ಬಿಡುಗಡೆ
