This is the title of the web page
This is the title of the web page

Live Stream

February 2023
T F S S M T W
 1
2345678
9101112131415
16171819202122
232425262728  

| Latest Version 8.0.1 |

Local News

ಮರ್ಚಂಟ್ಸ್ ಸೊಸೈಟಿ ವತಿಯಿಂದ ಪ್ರದೀಪ ಅಷ್ಟೇಕರ ಸನ್ಮಾನ Pradeep was honored by the Merchants' Society


 

ಬೆಳಗಾವಿ :
ಬೆಳಗಾವಿಯ ಅನಸೂರಕರಗಲ್ಲಿಯಲ್ಲಿರುವ ದಿ. ಬೆಳಗಾವಿ ಮರ್ಚಂಟ್ಸ್ ಕೋ.ಆಪ್ ಸೊಸೈಟಿ ವತಿಯಿಂದ ಪಯೋನಿಯರ್ ಅರ್ಬನ್ ಕೋ, ಆಪ್ ಬ್ಯಾಂಕಿನ ಚೆರಮನ್‌ ಪ್ರದೀಪ ಅಷ್ಟೇಕರ ಅವರನ್ನು ಸನ್ಮಾನಿಲಾಯಿತು. ಮಂಗಳವಾರ ಅನಸೂರಕರ ಗಲ್ಲಿಯಲ್ಲಿರುವ ಸೊಸೈಟಿ ಕಾರ್ಯಾಲಯದಲ್ಲಿ ಜರುಗಿದ ಸತ್ಕಾರ ಸಮಾರಂಭದಲ್ಲಿ ಸೊಸೈಟಿ ಚೇರಮನ್‌ ನಾರಾಯಣ ಚೌಗುಲೆ ಅಧ್ಯಕ್ಷತೆ ವಹಿಸಿದ್ದರು. ದಿ.ಮರಾಠಾ ಬ್ಯಾಂಕಿನ ಸಂಚಾಲಕ ಹಾಗೂ ಮಾಜಿ ಚೇರಮನ್ ಬಾಳಾಸಾಹೇಬ ಕಾಕತಕರ ಹಾಗೂ ಸಮರ್ಥ ಅರ್ಬನ್ ಕೊ.ಅಪ್ . ಸೊಸೈಟಿಯ ಚೇರಮನ್ ಅಜಯ ಸುನ್ನಾಳಕರ ಉಪಸ್ಥಿತರಿದ್ದರು. ಸೊಸೈಟಿಯ ಉಪಾಧ್ಯಕ್ಷ ಕುಮುದ ಭಾಟಿಯಾ ಉಪಸ್ಥಿತರಿದ್ದರು. ಶಾಖಾ ಚೇರಮನ್‌ ನಾರಾಯಣ ಕಿಟವಾಡಕರ ಇವರು ಶ್ರೀ ಪ್ರದೀಪ ಅಷ್ಟೇಕರ ಪರಿಚಯಿಸಿದರು. ಚೇರಮನ್‌ ನಾರಾಯಣ ಚೌಗುಲೆ ಸೊಸೈಟಿಯ ಆರ್ಥಿಕ ವ್ಯವಹಾರದ ಬಗ್ಗೆ ವಿವರಣೆ ನೀಡಿ 2023 ನೇ ವರ್ಷದಲ್ಲಿ ಸೊಸೈಟಿಯು ರೌಪ್ಯ ಮಹೋತ್ಸವ ವರ್ಷ ಆಚರಿಸುತ್ತಿದ್ದು , ದೊಡ್ಡ ಪ್ರಮಾಣದಲ್ಲಿ ರೌಪ್ಯ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಅರ್ಬನ ಬ್ಯಾಂಕಿನ ಚೇರಮನ್‌ ಪ್ರದೀಪ ಅಷ್ಟೇಕರ ಅವರು ಪಯೋನಿಯರ್ ಅರ್ಬನ್ ಬ್ಯಾಂಕಿನಲ್ಲಿ ರೂ .106 ಕೋಟಿಯ ಠೇವಣಿಗಳನ್ನು ಸಂಗ್ರಹಿಸಲಾಗಿದ್ದು ಹಾಗೂ ಬ್ಯಾಂಕಿಗೆ 100 ವರ್ಷ ತುಂಬಿದ ಬಗ್ಗೆ ಮಾಹಿತಿ ನೀಡಿದರು. ಕೇಂದ್ರ ಸರಕಾರದ ಸಹಕಾರ ಖಾತೆಯು ತಮಗೆ ಗೌರವಿಸಿದೆ ಎಂದು ತಿಳಿಸಿದರು . ಬೆಳಗಾವಿಯ ಸಹಕಾರ ಕ್ಷೇತ್ರದಲ್ಲಿ ಪ್ರಥಮ ಈ ತರಹ ಏಳಿಗೆಯಾಗಿರುತ್ತದೆ.ಇದು ಬೆಳಗಾವಿ ನಗರದಲ್ಲಿರುವ ಸಹಕಾರ ಕ್ಷೇತ್ರಕ್ಕೆ ಒಂದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಸತ್ಕಾರಕ್ಕೆ ಉತ್ತರಿಸಿದ ಪ್ರದೀಪ ಅಷ್ಟೇಕರ, ರಿಸರ್ವ್ ಬ್ಯಾಂಕ್ ಅನೇಕ ನಿಯಮಗಳನ್ನು ಹೇರಿದೆ. ಇದರಿಂದ ಬ್ಯಾಂಕುಗಳನ್ನು ನಡೆಸುವುದು ತುಂಬಾ ಕಷ್ಟದ ವಿಷಯವಾಗಿದ್ದು ತಂತಿ ಮೇಲೆ ನಡೆದಾಡಿದಂತಾಗುತ್ತದೆ. ಬ್ಯಾಂಕಿನ ಸಂಚಾಲಕರು ಹಾಗೂ ಸಿಬ್ಬಂದಿ ವರ್ಗ ಇವರ ಸಹಕಾರದಿಂದ ನಾವು ಯಶಸ್ಸನ್ನು ಪಡೆದಿರುತ್ತೇವೆ. ಠೇವಣಿದಾರರು ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮಲ್ಲಿ ಠೇವುಗಳನ್ನು ಇಟ್ಟು ಸಹಕರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ತಿಳಿಸಿದರು.

ಹಿರಿಯ ಸಂಚಾಲಕ ಅಶೋಕ ಬೋಳಗುಂಡಿ ವಂದಿಸಿದರು. ಸೊಸೈಟಿಯ ಹಿರಿಯ ಸಂಚಾಲಕ ಅಶೋಕ ಯಳ್ಳೂರಕರ , ಮಹೇಶ ರಾಯಕರ , ಶಿವಾಜಿ ಚವ್ಹಾಣ , ನಿತಿನ ಪವಾರ , ಸೊಸೈಟಿಯ ಜನರಲ್ ಮ್ಯಾನೇಜರ್ ಲಕ್ಷ್ಮೀಕಾಂತ ಮಕವಾನ , ಶಾಖೆ ಮ್ಯಾನೇಜರ್‌ ಸಂತೋಷ ಫಡತರೆ , ಸಲಹೆಗಾರ ಸಂಚಾಲಕ ಓಝಾ , ಕಾಯಿದೆ ಸಲಹೆಗಾರ ಸಂಚಾಲಕ ಸುರೇಶ ತರಳೆ, ವಕೀಲರಾದ ಪ್ರಭಾಕರ ಶೆಟ್ಟಿ , ಉಮೇಶ ಯರಡಾಳ , ಬಂಗಾರ ಮಾಪಕರಾದ ಎನ್ . ಎಮ್ . ರಾಯಕರ , ಆ್ಯಡಿಟರ್ ನಿತಿನ ಹಿರೇಮಠ ಹಾಗೂ ಸೊಸೈಟಿಯ ಸಿಬ್ಬಂದಿ ವರ್ಗ , ಪಿಗ್ಮಿ ಸಂಗ್ರಾಹಕರು ಉಪಸ್ಥಿತರಿದ್ದರು.


Jana Jeevala
the authorJana Jeevala

Leave a Reply