ಜನ ಜೀವಾಳ ಜಾಲ: ಬೆಳಗಾವಿಯ ಜನಪ್ರಿಯ ಹೊಟೇಲ ಉದ್ಯಮಿ ಹಾಗೂ ನ್ಯೂ ಗ್ರ್ಯಾಂಡ್ -ಮಿಲನ್ ಒಡೆಯರಾದ ನಿತೀನ್ ಬಂಢಾರಿ ಅವರು ತಮ್ಮ 70 ನೆಯ ವಯಸ್ಸಿನಲ್ಲಿ ಅನಾರೋಗ್ಯದಿಂದ ಇಂದು ಸಂಜೆ 4.30 ಕ್ಕೆ ನಿಧನರಾದರು.
ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಸದಾಶಿವನಗರದ ರುದ್ರಭೂಮಿಯಲ್ಲಿ ಸಂಜೆ 7 ಗಂಟೆಗೆ ಜರುಗಲಿದೆ ಎಂದು ಕುಟುಂಬ ಮೂಲಗಳು ‘ಜನ ಜೀವಾಳ’ ಕ್ಕೆ ತಿಳಿಸಿವೆ.
ಜನಪ್ರಿಯ ಹೊಟೇಲ್ ಉದ್ಯಮಿ ನಿತೀನ್ ಭಂಡಾರಿ ನಿಧನ
