ಕಾರ ಅಪಘಾತದಲ್ಲಿ ಪೊಲೀಸ ಇನ್ಸ್ಪೆಕ್ಟರ್ ಪಂಚಾಕ್ಷರಿ ಸಾಲಿಮಠ ದಾರುಣ ಸಾವು..!
ಸುಟ್ಟು ಕರಕಲಾದ ದೇಹ..!
ಐಎಸ್ ಅಧಿಕಾರಿ ಬೀಳಗಿ ಸಾವಿನ ದುಃಖ ಮಾಸುವ ಮುನ್ನ ನಡೆಯಿತು ಮತ್ತೊಂದು ಘೋರ ದುರಂತ.
ಬೆಳಗಾವಿ: ಸವದತ್ತಿ ತಾಲೂಕಿನ ಮೂರಗೋಡ ಮೂಲದ ಪೊಲೀಸ್ ಅಧಿಕಾರಿ ಪಿ.ವಿ.ಸಾಲಿಮಠ ಅವರು ನಿನ್ನೆ ಕಾರ ಅಪಘಾತದಲ್ಲಿ ದಾರುಣ ಸಾವನಪ್ಪಿದ್ದಾರೆ..!
ಇತ್ತೀಚಿಗಷ್ಟೇ ಬೈಲಹೊಂಗಲ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ವರ್ಗಾವಣೆ ಆಗಿದ್ದ ಅವರು, ಸದ್ಯ ಲೋಕಾಯುಕ್ತ ಪೊಲೀಸ ಇನ್ಸ್ಪೆಕ್ಟರ್ ಆಗಿ ಹಾವೇರಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು, ಕುಟುಂಬ ಸಮೇತ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ಅವರು, ಕುಟುಂಬವನ್ನು ಬಿಟ್ಟು ಮರಳಿ ಕರ್ತವ್ಯಕ್ಕೆ ಬರುವ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ನಿನ್ನೆ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಅಣ್ಣಿಗೇರಿ ಬಳಿ ಕಾರು ಡಿವೈಡರಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ನಿಧನರಾಗಿದ್ದಾರೆ.
ಕಾರು ಡಿವೈಡರಗೆ ಡಿಕ್ಕಿ ಹೊಡೆದು ಕಾರಿನಲ್ಲಿ ಬೆಂಕಿ ಸಂಭವಿಸಿದೆ. ಇದೇ ಸಮಯಕ್ಕೆ ಕಾರನ ಡಿಸೆಲ್ ಟ್ಯಾಂಕ್ ಬಾಯಿ ಕೂಡ ತೆರೆದಿದ್ದರಿಂದ ಬೆಂಕಿಯ ಕೆನ್ನಾಲಿಗೆ ತೀವ್ರತೆ ಪಡೆದುಕೊಂಡಿದೆ. ಕಾರ್ ಚಾಲನೆ ಸಮಯದಲ್ಲಿ ಸೀಟ್ ಬೆಲ್ಟ್ ಹಾಕಿದ್ದರು. ಅಪಘಾತ ಸಂಭವಿಸಿದ ಸಮಯದಲ್ಲಿ ಗಂಭೀರವಾಗಿ ಪೆಟ್ಟು ಬಿದ್ದಿದ್ದರಿಂದ ಹಾಗೂ ಸಿಲ್ಟ್ ಬೆಲ್ಟ್ ಧರಿಸಿದ್ದರಿಂದ ತಪ್ಪಿಸಿಕೊಳ್ಳಲು ಪರದಾಡಿದ್ದಾರೆ. ಅಲ್ಲದೆ ಡೊರ್ ಲಾಕ್ ಆಗಿದ್ದರಿಂದ ಲಾಕ್ ಕೂಡು ತೆರೆದುಕೊಂಡಿಲ್ಲ. ಆದ್ದರಿಂದ ಪೊಲೀಸ್ ಇನ್ಸಪೆಕ್ಟರ್ ಪಂಚಾಕ್ಷರಿ ಸಾಲಿಮಠ ಕಾರಿನಲ್ಲೇ ಸುಟ್ಟು ಕರಕಲಾಗಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಅಲ್ಲಿ ಧಾವಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಅಷ್ಟರಲ್ಲಿ ಇನ್ಸ್ಪೆಕ್ಟರ್ ದೇಹ ಸುಟ್ಟು ಕರಕಲಾಗಿತ್ತು. ಈ ದೃಶ್ಯ ಕಂಡವರ ಮಮ್ಮಲ ಮರಗಿ ನೀರಾಗಿದೆ.
ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ಅವರು ಜನಾನುರಾಗಿ ಅಧಿಕಾರಿ ಅಲ್ಲದೇ ಒಬ್ಬ ಒಳ್ಳೆ ಮಾನವೀಯ ಮೌಲ್ಯ ಹೊಂದಿರುವ ವ್ಯಕ್ತಿಯಾಗಿದ್ದರು. ಇವರ ಅಗಲಿಕೆಯಿಂದ ಕುಟುಂಬ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿವೆ.


