ಬೆಳಗಾವಿ: ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಕೋಟ್ಯಂತರ ರೂ. ನೀಡುವಂತೆ ಬೆದರಿಕೆಯೊಡಿದ್ದ ಆರೋಪದ ಮೇರೆಗೆ ಇದೀಗ ಅಕ್ಬರ್ ಪಾಷಾನನ್ನು ಸೋಮವಾರ ರಾತ್ರಿ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತರಲಾಗಿದೆ. ಆತನನ್ನು ನಾಗಪುರದಿಂದ ನೇರವಾಗಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕರೆತರಲಾಗಿತ್ತು. ಪೊಲೀಸ್ ತನಿಖೆ ಸಂದರ್ಭದಲ್ಲಿ ಆತನಿಗೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಇರುವ ಬಗ್ಗೆ ಖಚಿತವಾಗಿತ್ತು. ಅಕ್ಬರ್ ಭಾಷಾ ಈ ಹಿಂದೆ ಕ್ರಿಮಿನಲ್ ಹಿನ್ನಲೆಯುಳ್ಳ ಜಯೇಶ್ ಪೂಜಾರಿ ಎಂಬುವನ ಮೂಲಕ ನಿತಿನ್ ಗಡ್ಕರಿ ಅವರ ಕಚೇರಿಗೆ ಕರೆ ಮಾಡಿ 200 ಕೋಟಿ ರೂಪಾಯಿ ಬೆದರಿಕೆವೊಡ್ಡಿದ್ದರು. ಈ ಹಿಂದೆಯೇ ಜಯೇಶ್ ಪೂಜಾರಿಯನ್ನು ವಿಚಾರಣೆ ನಡೆಸಿ ಹಿಂಡಲಗಾ ಜೈಲಿಗೆ ಕರೆತರಲಾಗಿತ್ತು. ಇದೀಗ ಅಕ್ಬರ್ ಪಾಷಾನನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ನಾಗಪುರದಿಂದ ಬೆಳಗಾವಿ ಹಿಂಡಲಗಾ ಜೈಲಿಗೆ ಕರೆತರಲಾಗಿದೆ.
ಭಯೋತ್ಪಾದಕ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಅಕ್ಬರ್ ಪಾಷಾನನ್ನು ಬೆಳಗಾವಿ ಹಿಂಡಲಗಾ ಜೈಲಿಗೆ ಕರೆ ತಂದ ಪೊಲೀಸರು
