ಬೆಳಗಾವಿ : ನಗರದ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಟಿಳಕವಾಡಿ ಪೊಲೀಸರು ಒಟ್ಟು 8.30 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸೇರಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಸಾವರಕರ ರೋಡ್ ಒಂದು ಮನೆ ಮತ್ತು ಹಿಂದವಾಡಿಯಲ್ಲಿ ಇರುವ ಅಮಿತ ಡಿಲೆಕ್ಸ್ ಲಾಜಿಂಗ್ನಲ್ಲಿ ಕಳ್ಳತನವಾದ ಬಗ್ಗೆ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಿಗೆ ಸಂಬಂಧಿಸಿ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬ್ ರಾವ್ ಹಾಗೂ ಉಪಪೊಲೀಸ್ ಆಯುಕ್ತ ರೋಹನ ಜಗದೀಶ (ಕಾ&ಸು), ಮತ್ತು ಎನ್ ನಿರಂಜನ್ ರಾಜೇಅರಸ್ (ಅ&ಸಂ) ಶೇಖರಪ್ಪ ಎಚ್, ಎಸಿಪಿ ಖಡೇಬಜಾರ ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಟಿಳಕವಾಡಿ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪರಶುರಾಮ ಪೂಜೇರಿ ಅವರ ನೇತೃತ್ವದ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಎರಡು ಕಳ್ಳತನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಗಳಲ್ಲಿ 5,70,000 ರೂ. ಮೌಲ್ಯದ 58.860 ಗ್ರಾಂ ಬಂಗಾರದ ಕಂಗಣ ಒಂದು ಜೊತೆ ಹಾಗೂ 2,50,000 ರೂ. ಮೌಲ್ಯದ ಮ್ಯಾಟ್ ಗ್ರೇ ಬಣ್ಣದ ಯಮಹಾ ಆರ್15 ಮೋಟಾರ ಸೈಕಲ್ ನಂ: ಕೆಎ-22 ಎಚ್ಯು-2432 ಮತ್ತು ಕಪ್ಪು ಬಣ್ಣದ ಓದ್ದೋ ರೆನೋ 7 ಪ್ರೋ ಮೋಬೈಲ್ ಒಂದು 10,000/- ರೂ. ಮೌಲ್ಯದ ಹೀಗೆ ಪ್ರತ್ಯೇಕ ಎರಡು ಪ್ರಕಣಗಳಲ್ಲಿ ಒಟ್ಟು 8,30,000 ರೂ ಕಿಮ್ಮತ್ತಿನ ಸ್ವತ್ತನ್ನು ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದ್ದು ತನಿಖೆ ಮುಂದುವರಿಸಿದ್ದಾರೆ.
ತನಿಖಾ ತಂಡದಲ್ಲಿ ಟಿಳಕವಾಡಿ ಪೊಲೀಸ್ ಇನ್ಸ್ಪೆಕ್ಟರ್ ಪರಶುರಾಮ ಪೂಜೇರಿ, ಪಿಎಸ್ಐ ವಿಶ್ವನಾಥ ಘಂಬಾಮಠ (ಕಾ&ಸು), ಪಿಎಸ್ ಐ ಪ್ರಭಾಕರ ಡೊಳ್ಳಿ (ಅ&ವಿ), ಸಿಬ್ಬಂದಿಗಳಾದ ಮಹೇಶ ಪಾಟೀಲ, ಎಸ್. ಎಮ್. ಕರಲಿಂಗಣ್ಣವರ, ನಾಗೇಂದ್ರ ತಳವಾರ, ಲಾಡಜಿಸಾಬ ಮುಲ್ತಾನಿ, ಸತೀಶ ಗಿರಿ, ಅರುಣ ಪಾಟೀಲ ಇವರನ್ನೊಳಗೊಂಡ ತಂಡ ಕಾರ್ಯನಿರ್ವಹಿಸಿದ್ದಾರೆ. ಸಿಬ್ಬಂದಿಗಳ ಕಾರ್ಯ ವೈಖರಿಯನ್ನು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.