ಬೆಳಗಾವಿ : ಚನ್ನಮ್ಮನ ಕಿತ್ತೂರು ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಬೀಡಿ ಕ್ರಾಸ್ ರಸ್ತೆಯಲ್ಲಿ ಗಾಂಜಾ ಮಾರಾಟಕ್ಕೆ ಕಿತ್ತೂರಿಗೆ ಬರುತ್ತಿದ್ದ ಇಬ್ಬರು ಯುವಕರನ್ನು ಕಿತ್ತೂರು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮಂಗಳವಾರ ನಡೆದಿದೆ. ಬೆಳಗಾವಿಯ ಶಿವಾಜಿ ನಗರದ ನಿವಾಸಿ ಕಿರಣ ವಿರಕ್ತಮಠ ಹಾಗೂ ಬೈಲಹೊಂಗಲ ತಾಲೂಕಿನ ಹೊಗರ್ತಿ ಗ್ರಾಮದ ಯುವಕ ಕಲ್ಮಶ ಕೊಡಗನ್ನವರ (18) ಆರೋಪಿಗಳು. ಅಂದಾಜು ರೂ.10 ಸಾವಿರ ಮೌಲ್ಯದ 230 ಗ್ರಾಂ ತೂಕದ ಗಾಂಜಾ ಮಾರಾಟಕ್ಕೆ ಕಿತ್ತೂರಿಗೆ ಬೈಕ್ ಮೇಲೆ ಬಂದಿದ್ದರು. ಖಚಿತ ಮಾಹಿತಿ ಮೆರೆಗೆ ಪೊಲೀಸರು ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪಿಎಸೈ ಪ್ರವೀಣ ಗಂಗೋಳ, ವೈದ್ಯೆ ಡಾ.ಅನ್ನಪೂರ್ಣಾ ಅಂಗಡಿ ಇತರರು ಇದ್ದರು.