ಬೆಳಗಾವಿ : ಹಳೆಯ ಪ್ರಕರಣದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಾಯಕ ಶುಭಂ ಶೆಳಕೆಯನ್ನು ಮಾಳ ಮಾರುತಿ ಪೊಲೀಸರು ಬಂಧಿಸಿ
ಜಾಮೀನಿನ ಮೇಲೆ ಹೊರ ಬಂದಿದ್ದಾನೆ.
ಖಡೇ ಬಜಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ
ಭಾಷಾ ದ್ವೇಷಕ್ಕೆ ಸಂಬಂಧಿಸಿ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು. ಈ ಹಿನ್ನಲೆಯಲ್ಲಿ ಮಾಳಮಾರುತಿ ಪೊಲೀಸರು ಶಳಕೆಯನ್ನು ವಶಕ್ಕೆ ಪಡೆದಿದ್ದರು. ಮಾತ್ರವಲ್ಲ ಇತ್ತೀಚಿಗೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಶೆಳಕೆ ಅಪಹಾಸ್ಯ ಮಾಡಿದ್ದ. ಈ ಬಗ್ಗೆ ಸಂಘಟನೆಗಳು ಆತನ ವಿರುದ್ಧ ಕಿಡಿ ಕಾರಿದ್ದವು.