ಬೆಳಗಾವಿ: ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರನ್ನು ಕಿತ್ತೂರು ಕರ್ನಾಟಕ ನಿಯೋಗದೊಂದಿಗೆ ಭೇಟಿಯಾಗಿ ಕಿತ್ತೂರು ರಾಣಿ ಚೆನ್ನಮ್ಮ ಅವರ 200ನೇ ವರ್ಷಾಚರಣೆ ನಿಮಿತ್ತ ಬೆಳಗಾವಿ ವಿಮಾನ ನಿಲ್ದಾಣಕ್ಕೆ “ಕಿತ್ತೂರು ರಾಣಿ ಚನ್ನಮ್ಮ ವಿಮಾನ ನಿಲ್ದಾಣ’’ ಎಂದು ನಾಮಕರಣ ಹಾಗೂ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಚನ್ನಮ್ಮನ ಭವ್ಯವಾದ ಪ್ರತಿಮೆ ಸ್ಥಾಪನೆ ಜೊತೆಗೆ ಬೆಳಗಾವಿ- ಬೆಂಗಳೂರು ವಿಮಾನಯಾನ ಸೇವೆ ರದ್ದು ಮಾಡದೇ ಮುಂದುವರಿಸುವುದು, ಪುಣೆ, ಚೆನ್ನೈ ಕೊಚ್ಚಿನ್, ಲಖನೌ, ಮೈಸೂರು, ಮುಂಬಯಿ ನಗರಗಳಿಗೂ ಸಹ ವಿಮಾನಯಾನ ಸೇವೆಯನ್ನು ಒದಗಿಸುವಂತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಚಿವರಿಗೆ ಆಗ್ರಹಪೂರ್ವಕ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ಅರವಿಂದ ಬೆಲ್ಲದ, ಅಭಯ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಡಾ. ವಿ.ಐ. ಪಾಟೀಲ, ಡಾ. ರವಿ ಪಾಟೀಲ, ಮಲ್ಲಣ್ಣ ಯಾದವಾಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.