ಬೆಳಗಾವಿ :
ಕೆ ಎಲ್ ಇ ಸಂಸ್ಥೆಯ ರಾಜಾ ಲಖಮಗೌಡ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಪರೀಕ್ಷೆಯಾದ ಜೆಇಇ ಮೆನ್ 2023 ಸೆಶನ್ 1ರಲ್ಲಿ ಅತ್ಯುತ್ತಮ ಸಾಧನೆಗೈದು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕ್ರಷ್ಣ ಎಂ ಮುರಕುಟೆ 98.12%, ಆಸ್ಟಿನ್ ಡಿ 79.79% , ವಿಶ್ವೇಶ್ವರ ಎಂ 96.2% , ವಿ ಕೆ 95.12% , ಕುಮಾರ ಸಂಕೇತ ಎನ್ 93.53% ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಆಡಳಿತ ಮಂಡಳಿ ಸರ್ವ ಸದಸ್ಯರು, ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಕಾರ್ಯಾಧ್ಯಕ್ಷರು, ಮಂಡಳಿ ಸರ್ವ ಸದಸ್ಯರು, ಕೆ ಎಲ್ ಇ ಸಂಸ್ಥೆಯ ಆಜೀವ ಸದಸ್ಯ ಎಸ್.ಜಿ.ನಂಜಪ್ಪನವರ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಸಿ ಕಾಮಗೋಳ, ಉಪ ಪ್ರಾಂಶುಪಾಲ ಡಾ.ಸಂದೀಪ ಜವಳಿ, ಹಾಗೂ ಕಾಲೇಜಿನ ಎಲ್ಲ ಬೋಧಕ , ಬೋಧಕೇತರ ಸಿಬ್ಬಂದಿಯವರು , ವಿದ್ಯಾರ್ಥಿ ಬಳಗದವರು ಅಭಿನಂದನೆ ಸಲ್ಲಿಸಿದ್ದಾರೆ.