ಮುಂಬೈ : ಖ್ಯಾತ ಕ್ರಿಕೆಟ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಇದೀಗ ಬಾಲಿವುಡ್ ನಟಿ ಅನನ್ಯ ಪಾಂಡೆ ಜತೆ ಡೇಟಿಂಗ್, ಚಾಟಿಂಗ್ ಆರಂಭಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎಂಬಂತೆ ಪಾಂಡ್ಯ ಅವರು ಇನ್ ಸ್ಟಾ ಗ್ರಾಂದಲ್ಲಿ ಅನನ್ಯ ಪಾಂಡೆ ಅವರನ್ನು ಹಿಂಬಾಲಿಸುತ್ತಿದ್ದಾರೆ. ಅನನ್ಯ ಸಹ ಹಾರ್ದಿಕ ಅವರನ್ನು ಹಿಂಬಾಲಿಸುತ್ತಿದ್ದು ಪಾಂಡ್ಯ ಅವರು ಈ ಮೊದಲು ಸರ್ಬಿಯಾದ ರೂಪದರ್ಶಿ ಜತೆ ಮದುವೆಯಾಗಿ ನಾಲ್ಕು ವರ್ಷದ ಅಗಸ್ತ್ಯ ಎಂಬ ಮಗನನ್ನು ಪಡೆದಿದ್ದರು. ಆದರೆ, ಕೆಲ ದಿನಗಳ ಹಿಂದೆ ಇಬ್ಬರೂ ವಿಚ್ಛೇದನ ಪಡೆದಿದ್ದರು. ಇದೀಗ ಅನನ್ಯ ಪಾಂಡೆ ಜೊತೆ ಹಾರ್ದಿಕ ಪಾಂಡ್ಯ ಹೆಸರು ತಳಕು ಹಾಕಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹೊಸ ಇನ್ನಿಂಗ್ಸ್ ? ಪಾಂಡೆ ಜೊತೆಗೆ ಚಾಟಿಂಗ್ ಆರಂಭಿಸಿದ ಪಾಂಡ್ಯ
