ಬೆಳಗಾವಿ:2024ರ ಡಿಸೆಂಬರ್ 10 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದಾಗ ಪಂಚಮಸಾಲಿ 2ಎ ಮೀಸಲಾತಿ ಪ್ರತಿಭಟನೆ ನಡೆದಿತ್ತು. ಆ ಸಂದರ್ಭದಲ್ಲಿ ಉಂಟಾದ ಘಟನೆಗೆ ಸಂಬಂಧಿಸಿದಂತೆ ವಿಚಾರಣಾ ಆಯೋಗದ ಅಧಿಕಾರಿಗಳು ಆಗಸ್ಟ್ 18 ರಿಂದ ಸಾಕ್ಷಿದಾರರ ವಿಚಾರಣೆ ಪ್ರಾರಂಭಿಸಿದ್ದರು. ಪ್ರತಿಭಟನಾ ಕಾಲಕ್ಕೆ ಗಾಯಗೊಂಡ ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾಕಾರರ ವಿಚಾರಣೆ ಕೈಗೊಂಡಿದ್ದು ವಿಚಾರಣೆ ಘಟ್ಟ ಅಂತಿಮ ಹಂತದಲ್ಲಿದೆ. ಈ ಹಿನ್ನಲೆಯಲ್ಲಿ ಅಕ್ಟೋಬರ್ 15 ರೊಳಗೆ ಆಸಕ್ತರು ಬೆಳಗಾವಿ ಸುವರ್ಣಸೌಧದ ಎರಡನೇ ಮಹಡಿ ಕೊಠಡಿ, ಸಂಖ್ಯೆ 219 ರಲ್ಲಿನ ವಿಚಾರಣಾ ಆಯೋಗದ ಎದುರು ಹಾಜರಾಗಿ ಮೌಖಿಕ ಸಾಕ್ಷ್ಯ ಮತ್ತು ದಾಖಲಾತಿ ಸಾಕ್ಷ್ಯ ಹಾಜರುಪಡಿಸಬಹುದು ಎಂದು ನಿವೃತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಏಕ ಸದಸ್ಯ ವಿಚಾರಣಾಧಿಕಾರಿ ಬನ್ನಿಮಟ್ಟಿ ಹನುಮಂತಪ್ಪ ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.