ಬೆಳಗಾವಿ: ರಾಮತೀರ್ಥನಗರದ ಕಣಬರ್ಗಿ ರಸ್ತೆಯಲ್ಲಿಯ ಶ್ರೀ ಕಾರ್ಯಸಿದ್ದಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ದಿನಾಂಕ 15 ರಂದು ಸಂಜೆ 6-30ಕ್ಕೆ ಉಚಿತ ಪಂಚ ಸಹಸ್ರ ದೀಪೋತ್ಸವ ಜರುಗಲಿದೆ.
ಕಾರ್ಯಸಿದ್ಧಿ ಆಂಜನೇಯಸ್ವಾಮಿ ದೇವಸ್ಥಾನ ನಿರ್ಮಾಣಗೊಂಡು 6 ವಸಂತಗಳು ಪೂರೈಸಿದ್ದು, ಈ ಕಾರ್ತಿಕೋತ್ಸವ ಸಂದರ್ಭದ ನಿಮಿತ್ತ ಪಂಚ ಸಹಸ್ರ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ದೀಪೋತ್ಸವದಲ್ಲಿ ಎಲ್ಲರಿಗೂ ಪಾಲ್ಗೊಳ್ಳಲು ಅವಕಾಶವಿದ್ದು , ಪ್ರತಿಯೊಬ್ಬರಿಗೆ 10 ದೀಪಗಳನ್ನು ಪ್ರಜ್ವಲಿಸಲು ಮಾತ್ರ ಅವಕಾಶವಿದೆ. ಈ ಪವಿತ್ರ ಕಾರ್ಯಕ್ರಮದ ಉದ್ಘಾಟಕರಾಗಿ ಉತ್ತರ ಕ್ಷೇತ್ರ ಶಾಸಕ ಆಸೀಫ್ ಸೇಟ್ , ವಿಶೇಷ ಆಹ್ವಾನಿತರಾಗಿ
ಬೆಳಗಾವಿ ಜಿಲ್ಲಾ ನಿವ್ರತ್ತ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ
ಆಗಮಿಸಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ, ನಗರಸೇವಕ ಹನುಮಂತ ಕೊಂಗಾಲಿ, ಮಾಜಿ ಮೇಯರ್ ಎನ್ .ಬಿ.ನಿರ್ವಾಣಿ, ಸೂಪರ್ ವಾಕಿಂಗ್ ಟೀಮ್ ನ ಅಧ್ಯಕ್ಷ ಮಲ್ಲಿಕಾರ್ಜುನ ಹಿತ್ತಲಮನಿ, ಮುಖಂಡ ಸುರೇಶ ಯಾದವ ಉಪಸ್ಥಿತರಿರುವರು. ಅಧ್ಯಕ್ಷತೆ ಯನ್ನು ಸುರೇಶ ಉರಬಿನಹಟ್ಟಿ ವಹಿಸುವರು. ಅತ್ಯಂತ ಪವಿತ್ರವಾದ ಈ ದೀಪೋತ್ಸವ ಕಾರ್ಯಕ್ರಮಕ್ಕೆ ಸರ್ವರೂ ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿ ಪುನೀತರಾಗುವಂತೆ ದೇವಸ್ಥಾನದ ಟ್ರಸ್ಟ್ ಕಮಿಟಿ ಅಧ್ಯಕ್ಷ ಸುರೇಶ ಉರಬಿನಹಟ್ಟಿ ಕೋರಿದ್ದಾರೆ.
ಕಾರ್ಯಸಿದ್ದಿ ಆಂಜನೇಯ ದೇವಸ್ಥಾನದಲ್ಲಿ ಪಂಚ ಸಹಸ್ರ ದೀಪೋತ್ಸವ ಶನಿವಾರ


