ಬೆಳಗಾವಿ : ಬೆಳಗಾವಿಯ ಉದ್ಯಮಿ ಸಂತೋಷ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಳಮಾರುತಿ ಪೊಲೀಸರು ವೈದ್ಯನನ್ನು ಬಂಧಿಸಿದ್ದಾರೆ. ಇದುವರೆಗೆ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.
ಬೆಳಗಾವಿ ಖಾಸಗಿ ಆಸ್ಪತ್ರೆಯ ವೈದ್ಯ ಪ್ರಶಾಂತ ಶಿವಾನಂದ (38) ಬಂಧಿತ ವೈದ್ಯ. ಸಂತೋಷ ಪದ್ಮಣ್ಣವರ ಅವರಿಗೆ ಯಾವ ರೀತಿಯ ಮಾತ್ರೆ ಹಾಗೂ ಚುಚ್ಚುಮದ್ದು ಕೊಡಬೇಕು ಎಂದು ಆರೋಪಿಗಳಿಗೆ ಪ್ರಶಾಂತ ಸೂಚನೆ ನೀಡಿದ್ದರು. ಪ್ರಶಾಂತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 9 ರಂದು ಉದ್ಯಮಿ ಸಂತೋಷ
ಪದ್ಮಣ್ಣವರ ಅವರನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು. ಆದರೆ, ಸಂತೋಷ ಪದ್ಮಣ್ಣವರ ಪತ್ನಿ ಸರಿತಾ ಉರ್ಫ್ ಉಮಾ ಅವರು ಹೃದಯಘಾತದಿಂದ ಪತಿ ಮೃತಪಟ್ಟಿದ್ದರು ಎಂದು ಬಿಂಬಿಸಿದ್ದರು.