ದೆಹಲಿ : 76ನೇ ಗಣರಾಜ್ಯೋತ್ಸವದ ಹಿನ್ನೆಲೆ ರಾಷ್ಟ್ರಪತಿ ದೌಪದಿ ಮುರ್ಮು ಪದ್ಮಶ್ರೀ ಪ್ರಶಸ್ತಿ ಘೋಷಿಸಿದ್ದಾರೆ. ರಾಜ್ಯದ ಮೂವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಲಬುರಗಿ ಮೂಲದ ದೇಶದ ಹೆಸರಾಂತ ಕ್ಯಾನ್ಸರ್ ವೈದ್ಯೆ ಡಾ. ವಿಜಯ ಲಕ್ಷ್ಮಿ ದೇಶಮಾನೆ, ಬಾಗಲಕೋಟೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜೀ ಸುಗಟೇರ್ ಹಾಗೂ ತೊಗಲುಗೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಕೇಂದ್ರ ಸರ್ಕಾರವು ಈ ಸಾಲಿನ ಅತ್ಯುನ್ನತ ನಾಗರಿಕ ಸೇವಾ ಪ್ರಶಸ್ತಿಗಳಾದ ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪುರಸ್ಕೃತರ ಹೆಸರುಗಳನ್ನು ಶನಿವಾರ ಪ್ರಕಟಿಸಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದೌಪದಿ ಮುರ್ಮು ಅವರು ಪ್ರಶಸ್ತಿಯನ್ನು ಘೋಷಿಸಿದರು.
ಪ್ಯಾರಾಲಿಂಪಿಕ್ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಹರ್ವಿಂದರ್ ಸಿಂಗ್ ಹಾಗೂ ಕರ್ನಾಟಕ ವೆಂಕಪ ಅಂಬಾಜಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಗರ್ಭ ಕೊರಳಿನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಹಾಗೂ ಚಿಕಿತ್ಸೆ ನೀಡುವಲ್ಲಿ ಗಮನಾರ್ಹ ಕೆಲಸ ಮಾಡಿದ ಸ್ತ್ರೀರೋಗ ತಜ್ಞೆ ಡಾ. ನೀರಜಾ ಭಾತ್ಸಾ, ತುಳಿತಕ್ಕೊಳಗಾದ ಮುಸಾಹರ್ ಸಮುದಾಯದ ಏಳಿಗಾಗಿ ‘ನಯೀ ಆಶಾ’ ಸಂಘಟನೆ ಮೂಲಕ ಶ್ರಮಿಸಿದ ಭೋಜಪುರದ ಸಾಮಾಜಿಕ ಕಾರ್ಯಕರ್ತ ಭೀಮ್ ಸಿಂಗ್ ಭವೇಶ್, ಕಳೆದ ಐದು ದಶಕಗಳಿಂದ ನಾಗಸ್ವರವಾದನದ ಥವಿಲ್ ನುಡಿಸುತ್ತಿರುವ ಪಿ. ದಚ್ಚಣಮೂರ್ತಿ, ಹಣ್ಣು ಬೆಳೆಯಲ್ಲಿ ವಿಶಿಷ್ಟ ಸಾಧನೆ ಮಾಡಿದ ನಾಗಾಲ್ಯಾಂಡ್ನ ಎಲ್.ಹ್ಯಾಂಗ್ತಿಂಗ್ ಅವರಿಗೆ ಪದ್ಮಶ್ರೀ ದೊರೆತಿದೆ.
ಕಲೆ, ಸಮಾಜುಮುಖಿ ಕಾರ್ಯ, ಸಾರ್ವಜನಿಕ ವ್ಯವಹಾರ, ವಿಜ್ಞಾನ ಹಾಗೂ ಎಂಜಿನಿಯರಿಂಗ್, ವ್ಯಾಪಾರ ಹಾಗೂ ಕೈಗಾರಿಕೆ, ವೈದ್ಯಕೀಯ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ ಮತ್ತು ನಾಗರಿಕ ಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದವರಿಗ ಪದ್ಮಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡುತ್ತದೆ.