ಬೆಳಗಾವಿ : ಹಿಡಕಲ್ ಜಲಾಶದಿಂದ ಹುಬ್ಬಳ್ಳಿ- ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ವಿರೋಧಿಸಿ ನಮ್ಮ ನೀರು ನಮ್ಮ ಹಕ್ಕು ಅಭಿಯಾನದ ಕುರಿತು ಜಿಲ್ಲೆಯ ವಿವಿಧ ಮಠಾಧೀಶರು, ಮೌಲ್ವಿಗಳು, ಚರ್ಚ್ ನ ಪಾಧರ್, ಕೈಗಾರಿಕಾ ಉದ್ಯಮಿಗಳು, ಕನ್ನಡ ಪರ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು, ವಿವಿಧ ದಲಿತ ಸಂಘಟನೆಗಳು, ಬೆಳಗಾವಿ ನವೋದ್ಯಮಗಳ ಒಕ್ಕೂಟ, ರೈತ ಸಂಘಟನೆಗಳು, ಬೆಳಗಾವಿ ಬಾರ್ ಅಸೋಸಿಯೇಷನ್, ಪರಿಸರ ಪ್ರೇಮಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಮಾರುತಿ ಗಲ್ಲಿಯ ಮಾರುತಿ ಮಂದಿರದಲ್ಲಿ ಜ.30 ರಂದು ಬೆಳಗ್ಗೆ 10.30ಕ್ಕೆ ನಮ್ಮ ಜಿಲ್ಲೆಯ ನೀರು ಉಳಿವಿಗಾಗಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.