ಬೆಳಗಾವಿ : ರಾಜ್ಯದ ಅತ್ಯಂತ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಇದೀಗ ಶಿಶು ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಕೇವಲ 60 ಸಾವಿರ ₹ ಒಂದು ತಿಂಗಳ ಶಿಶು ಮಾರಾಟವಾಗುತ್ತಿರುವುದು ಅತ್ಯಂತ ಖೇದಕರವಾಗಿದೆ. ಮಾನವೀಯ ಸಂಬಂಧ ಹಾಗೂ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಲಾಗುತ್ತಿದೆ.
ಕೇವಲ ಒಂದು ತಿಂಗಳ ಹೆಣ್ಣು ಮಗುವನ್ನು 60 ₹ ಸಾವಿರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನಿಂಗ್ ಅವರು ನಡೆಸಿದ ಕಾರ್ಯಾಚರಣೆ ನಿಜಕ್ಕೂ ಎಂಥವರನ್ನು ಯೋಚಿಸುವಂತೆ ಮಾಡುತ್ತದೆ.
ಸಾಮಾಜಿಕ ಕಾರ್ಯಕರ್ತರೊಬ್ಬರ ವೇಷ ಧರಿಸಿದ ವ್ಯಕ್ತಿಯನ್ನು ಸಜ್ಜುಗೊಳಿಸಿ ಮಗು ಮಾರಾಟ ಮಾಡುತ್ತಿದ್ದ ಆರೋಪಿಗೆ ಕರೆ ಮಾಡಿದ್ದಾರೆ. ನಮಗೆ ಮದುವೆಯಾಗಿ 15 ವರ್ಷವಾದರೂ ಇನ್ನೂ ಮಕ್ಕಳಾಗಿಲ್ಲ. ನಿಮ್ಮ ಬಳಿ ಇರುವ ಮಗುವನ್ನು ನಮಗೆ ಕೊಟ್ಟರೆ ನೀವು ಕೇಳಿದಷ್ಟು ಹಣ ನೀಡುತ್ತೇವೆ ಎಂದು ಅವರನ್ನು ವಿಶ್ವಾಸಕ್ಕೆ ಪಡೆದು ನಂಬಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮಹಿಳೆ ಕೊನೆಗೂ ಮನವರಿಕೆ ನಂತರ ಮಗುವನ್ನು ನೀಡುವುದಾಗಿ ಹೇಳುತ್ತಾರೆ. ಮಗುವನ್ನು ಬೆಳಗಾವಿ ದೇವಸ್ಥಾನದ ಬಳಿ ಕೊಟ್ಟು ಹಣ ತೆಗೆದುಕೊಂಡು ಹೋಗಿ ಎಂದು ಕಾರ್ಯಕರ್ತರು ಹೇಳಿದಾಗ ಬೇಡ ಹೊರ ವಲಯದ ಹೆದ್ದಾರಿ ಬಳಿ ಬನ್ನಿ ಎಂದು ವಿವರಿಸುತ್ತಾಳೆ. ಆಗ ಪೊಲೀಸರು ವೇಷ ಮರೆಸಿಕೊಂಡು ಮಹಿಳೆಗೆ ಸಂಶಯ ಬಾರದಂತೆ ಸ್ಥಳದಲ್ಲಿ ಹಾಜರಿರುತ್ತಾರೆ. ಆರೋಪಿ ಮಹಿಳೆ ಕಾರಿನಲ್ಲಿ ಬಂದು ಮಗು ತೋರಿಸಿ ಸಾಮಾಜಿಕ ಕಾರ್ಯಕರ್ತೆಗೆ ನೀಡುತ್ತಿದ್ದಂತೆ ಪತಿಯ ವೇಷದ ಧರಿಸಿದ ಪೊಲೀಸ್ ಅಧಿಕಾರಿ ಆರೋಪಿಯನ್ನು ವಶಕ್ಕೆ ಪಡೆಯುತ್ತಾರೆ. ಕೊನೆಗೂ ನಾಟಕಕ್ಕೆ ತೆರೆ ಬಿದ್ದು ಆರೋಪಿಗಳು ಪೊಲೀಸರ ವಶವಾಗುತ್ತಾರೆ. ಇದು ಬೆಳಗಾವಿಯಲ್ಲಿ ಅತ್ಯಂತ ಬಹಳ ಕಾಲದಿಂದ ನಡೆಯುತ್ತಿರುವುದು ನಡೆಯುತ್ತಿರುವ ಶಿಶುಗಳ ಮಾರಾಟಕ್ಕೆ ದೊಡ್ಡ ಗುಮಾನಿ ದೊರೆತಂತಾಗಿದೆ.
ಎರಡನೇ ಘಟನೆ : ಕಿತ್ತೂರಿನಲ್ಲಿ ನಕಲಿ ವೈದ್ಯನು ನೈಜ ವೈದ್ಯರಿಗಿಂತ ತಾನೇನು ಕಡಿಮೆ ಇಲ್ಲ ಎನ್ನುವಂತೆ ಇನ್ನೂ ಜಗತ್ತಿನ್ನೇ ನೋಡದ ಮಕ್ಕಳ ಜೀವವನ್ನೇ ಕಸಿಯುತ್ತಿರುವುದು ನಿಜಕ್ಕೂ ಶೋಚನೀಯ.
ಆತನ ಜಮೀನಿನಲ್ಲಿ ಮಕ್ಕಳ ಭ್ರೂಣ ಹುಗಿದು ಹಾಕಿರುವ ಕರಾಳತೆಯ ಘಟನೆಗಳನ್ನು ಪತ್ತೆಹಚ್ಚಲಾಗಿದೆ. ಆತನ ಕೃತ್ಯಕ್ಕೆ ಸಿಬ್ಬಂದಿಯನ್ನು ಸಾಥ್ ನೀಡಿದ್ದು ಪೊಲೀಸರು ಒಟ್ಟಾರೆ ಎಲ್ಲರನ್ನೂ ಇದೀಗ ಬಂಧಿಸುವುದರೊಂದಿಗೆ ದೊಡ್ಡ ಅಪರಾಧಕ್ಕೆ ತೆರೆ ಎಳೆಯಲಾಗಿದೆ.