ಬೆಳಗಾವಿ: ನಗರದ ವಿವಿಧೆಡೆ 20 ಕ್ಕೂ ಹೆಚ್ಚು ಬೈಕ್ ಕಳ್ಳತನ ಮಾಡಿದ ಆರೋಪದಡಿ ಒಬ್ಬನನ್ನು ಸಿಸಿಬಿ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಬೆನಕನಹೊಳಿಯ ಸಂಜು ಮೇಖಳಿ
ಬಂಧಿತನಾಗಿದ್ದಾನೆ. ಈತ ಇತ್ತೀಚೆಗೆ ಬೆಳಗಾವಿ ಕೋಟೆ ರಸ್ತೆಯಲ್ಲಿ ಮತ್ತು ಕಪಿಲೇಶ್ವರ ದೇವಸ್ಥಾನ ಬಳಿ ಈತ ವಾಹನಗಳ ಕಳ್ಳತನ ಮಾಡಿದ್ದ. ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿರುವ ಕುರಿತು ತಪ್ಪು ಒಪ್ಪಿಕೊಂಡಿದ್ದಾನೆ. ರೂ.2,78,000 ಮೌಲ್ಯದ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


