ಬೆಳಗಾವಿ : ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿದ್ದ ಮಗನಿಗೆ ಜಾಮೀನು ಕೊಡಿಸುವ ನೆಪದಲ್ಲಿ ಆತನ ತಾಯಿ ಮೇಲೆ ವ್ಯಕ್ತಿಯೊಬ್ಬ ಒಂದು ತಿಂಗಳಿನಿಂದ ನಿರಂತರ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ಮಗನನ್ನು ಬಿಡಿಸಿಕೊಂಡು ಬರುತ್ತೇನೆ ಎಂದು ನನ್ನನ್ನು ದೈಹಿಕವಾಗಿ ತನ್ನ ಇಚ್ಛೆಗೆ ವಿರುದ್ಧವಾಗಿ ತಿಂಗಳುಗಟ್ಟಲೆ ಬಳಸಿಕೊಂಡು ಅತ್ಯಾಚಾರ ಮಾಡಲಾಗಿದೆ. ಈಗ ಆ ವ್ಯಕ್ತಿ ತನ್ನೊಂದಿಗೆ ಇದ್ದ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಆರೋಪಿ ಇಷ್ಟಕ್ಕೆ ಸುಮ್ಮನಾಗದೆ ತನ್ನ ಮಗಳನ್ನು ಅಪಹರಣ ಮಾಡಿದ್ದಾನೆ. ಈ ಬಗ್ಗೆಯೂ ನ್ಯಾಯ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮನವಿ ಮಾಡಿ ನ್ಯಾಯಕ್ಕಾಗಿ ಕೋರಿರುವುದಾಗಿ ಮಹಿಳೆ ತಿಳಿಸಿದರು.
ಮೊದಲಿಗೆ ತಮ್ಮ ಸಮಸ್ಯೆ ಬಗ್ಗೆ ಮಹಿಳೆ ಅವನ ಬಳಿ ಹೇಳಿಕೊಂಡಿದ್ದಾರೆ. ತನ್ನ ಎರಡನೇ ಮಗ ಡಿಸೆಂಬರ್ ನಲ್ಲಿ ಕೊಲೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ಅವನನ್ನು ಬಿಡಿಸಿಕೊಂಡು ಬರಲು ಜಾಮೀನು ಬೇಕಾಗಿತ್ತು. ಆಗ ಯಾರೂ ಸಹಾ ಸಹಾಯಕ್ಕೆ ಬಾರದೆ ಇದ್ದಾಗ ಪರಿಚಿತ ವ್ಯಕ್ತಿ ಮುಂದೆ ಬಂದು ಎಂದು ಮಹಿಳೆಯನ್ನು ಬಳಸಿಕೊಂಡಿದ್ದಾನೆ.
ನಿಮ್ಮ ಮಗನಿಗೆ ಜಾಮೀನು ನೀಡುತ್ತೇನೆ. ಆದರೆ ದೈಹಿಕ ಸಂಬಂಧ ಬೆಳೆಸುವಂತೆ ಮನವಿ ಮಾಡಿದ್ದ. ಅನ್ಯ ಮಾರ್ಗವಿಲ್ಲದೆ ಮಹಿಳೆ ಒಪ್ಪಿದ್ದು, ಮಗ ಜಾಮೀನು ಪಡೆದ ಬಳಿಕ ತನ್ನ ತನ್ನ ತಪ್ಪಿನ ಅರಿವಾಗಿ ಸಂತ್ರಸ್ತೆ ಆತನೊಂದಿಗೆ ಸಂಪರ್ಕ ಕಡಿತ ಮಾಡಿದ್ದಾರೆ.
ಇದರಿಂದ ಸಿಟ್ಟಿಗೆದ್ದ ಆರೋಪಿ ಈಗ ಮಹಿಳೆ ಜೊತೆಗೆ ಇದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ತನಗೆ ಹಣ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಮಹಿಳೆ ದೂರಿದ್ದಾರೆ.