ಬೆಳಗಾವಿ: ಬುಧವಾರ ಮಕರ ಸಂಕ್ರಾಂತಿ ಹಬ್ಬ ಆಚರಣೆಯಾಗುತ್ತಿದ್ದು ಅದಕ್ಕೂ ಮುನ್ನ ದಿನವಾದ ಮಂಗಳವಾರ ಹಬ್ಬಕ್ಕೆ ಶುಭ ಸಂಕೇತ ಎನ್ನುವಂತೆ ವರುಣನ ಆರ್ಭಟ ಕಂಡುಬಂದಿದೆ. ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಕೆಲವೆಡೆ ಧಾರಾಕಾರವಾಗಿ ಮಳೆ ಸುರಿಯಿತು. ಕೆಲ ಹೊತ್ತು ಮಳೆ ಸುರಿದಿದ್ದರಿಂದ ಭೂಮಿ ತಂಪೆರಯಿತು ಚರಂಡಿಗಳಲ್ಲಿ ನೀರು ಹರಿದು ಹೋಗುವಷ್ಟು ಮಳೆ ಬಂತು.


