ಬೆಳಗಾವಿ : ಪ್ರಸಕ್ತ ಸಾಲಿನ ಡಿ. ಎಲ್. ಡಿ ಪ್ರಥಮ ವರ್ಷದ ಕೋರ್ಸಿನ ವ್ಯಾಸಾಂಗಕ್ಕಾಗಿ ಡಿ. ಎಲ್. ಇಡಿ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾದಡಿ ಲಭ್ಯ ಇರುವ ಸೀಟುಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಆಪ್ ಲೈನ್ ಮೂಲಕ ಜೂ. 5 ರ ಒಳಗಾಗಿ ಮಣ್ಣೂರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲಾಖಾ ವೆಬ್ ಸೈಟ್ಗೆ ಬೇಟಿ ನೀಡಬಹುದು, ದೂ. ೯೮೪೫೨೩೧೮೮೫, ೯೮೮೬೮೯೫೭೬೧ ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಮಣ್ಣೂರ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.