ಈ ವಿಶೇಷ ಸಾರಿಗೆಗಳಲ್ಲಿ ಮಹಿಳಾ ಪ್ರಯಾಣಿಕರಿಗೆ “ಶಕ್ತಿ ಯೋಜನೆ” ಯಡಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.
ಬೆಳಗಾವಿ: ಪ್ರಸ್ತುತ ಮಳೆಗಾಲದ ದಿನಗಳು ಪ್ರಾರಂಭವಾಗಿರುವುದರಿಂದ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಐತಿಹಾಸಿಕ ಪ್ರಸಿದ್ಧ ಸ್ಥಳಗಳಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗಗಳ ವಿವಿಧ ಘಟಕಗಳಿಂದ ಭಾನುವಾರ ಮತ್ತು ರಜಾ ದಿನಗಳಂದು ವಿಶೇಷ “ಪ್ಯಾಕೇಜ ಟೂರ್” ಸಾರಿಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.
ಹುಬ್ಬಳ್ಳಿ ಗ್ರಾಮಾಂತರ ವಿಭಾಗ: ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಹುಬ್ಬಳ್ಳಿ-ಜೋಗ ಫಾಲ್ಸ್ಗೆ ಬೆಳಿಗ್ಗೆ 8ಗಂಟೆಗೆ ಐರಾವತ್ ಬಸ್ ಹೊರಡಲಿದ್ದು, (ಹೋಗಿ ಬರುವುದಕ್ಕೆ) 600 ರೂ ಪ್ರಯಾಣ ದರ ನಿಗದಿಸಲಾಗಿದೆ. ಬೆಳಿಗ್ಗೆ 7:30 ಗಂಟೆಗೆ ರಾಜಹಂಸ ಬಸ್ ಹೊರಡಲಿದ್ದು (ಹೋಗಿ ಬರುವುದಕ್ಕೆ) 430 ರೂ. ದರ ನಿಗದಿಯಾಗಿದೆ. ಬೆಳಿಗ್ಗೆ 8:10ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು (ಹೋಗಿ ಬರುವುದಕ್ಕೆ) 350 ರೂ. ದರವಿದೆ.
ಧಾರವಾಡ ವಿಭಾಗದಿಂದ ವೇಗದೂತ ಸಾರಿಗೆ: ಧಾರವಾಡ ವಿಭಾಗದಿಂದ ಧಾರವಾಡ-ದಾಂಡೇಲಿಗೆ 7:30 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ಧಾರವಾಡ-ಗೋಕಾಕ ಫಾಲ್ಸ್ಗೆ 7:30 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 375 ರೂ. ದರ ನಿಗದಿಪಡಿಸಲಾಗಿದೆ.
ಚಿಕ್ಕೋಡಿ ವಿಭಾಗ: ಚಿಕ್ಕೋಡಿಯಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 220 ರೂ ಹಾಗೂ ಸಂಕೇಶ್ವರದಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 9:30ಕ್ಕೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು, 160 ರೂ ಮತ್ತು ನಿಪ್ಪಾಣಿ- ಗೋಗಾಕ ಫಾಲ್ಸ್ಗೆ ವಾಯವ್ಯ ಕರ್ನಾಟಕ ಸಾರಿಗೆ ಬಸ್ ಹೊರಡಲಿದ್ದು, 220 ರೂ ಪ್ರಯಾಣ ದರವಿರಲಿದೆ.
ಬೆಳಗಾವಿ ವಿಭಾಗ : ಬೆಳಗಾವಿಯಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 9 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 190 ರೂ ದರ ನಿಗದಿಸಲಾಗಿದೆ.
ಹಾವೇರಿ ವಿಭಾಗ: ಹಾವೇರಿಯಿಂದ ಜೋಗ ಫಾಲ್ಸ್ಗೆ ಬೆಳಿಗ್ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 340 ರೂ. ಹಾಗೂ ರಾಣೇಬೆನ್ನೂರಿನಿಂದ ಜೋಗ ಫಾಲ್ಸ್ಗೆ ಬೆಳಿಗ್ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 320 ರೂ ದರ ನಿಗದಿಸಲಾಗಿದೆ.
ಗದಗ ವಿಭಾಗ: ಗದಗದಿಂದ ಜೋಗ ಫಾಲ್ಸ್ಗೆ ಬೆಳಿಗ್ಗೆ 7 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ನಿರ್ಗಮಿಸಲಿದ್ದು (ಹೋಗಿ ಬರುವುದಕ್ಕೆ) 500 ರೂ ಹಾಗೂ ಗದಗದಿಂದ ಗೋಕಾಕ ಫಾಲ್ಸ್ಗೆ ಬೆಳಿಗ್ಗೆ 8 ಗಂಟೆಗೆ ವಾಯವ್ಯ ಕರ್ನಾಟಕ ಸಾರಿಗೆ ಹೊರಡಲಿದ್ದು 340 ರೂ. ನಿಗದಿಸಲಾಗಿದೆ.
ಈ ವಿಶೇಷ ಪ್ಯಾಕೇಜ್ ಸಾರಿಗೆಗಳ ಮುಂಗಡ ಟಿಕೇಟ ಬುಕಿಂಗ್ಗಾಗಿ www.ksrtc.in ವೆಬ್ ಸೈಟ್ ಅಥವಾ ಬಸ್ ನಿಲ್ದಾಣ ರಿಸರ್ವೇಶನ್ ಕೌಂಟರ್ ಗಳ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.