ಜನ ಜೀವಾಳ ಜಾಲ ಬೆಳಗಾವಿ : ಶ್ರೀ ಯಲ್ಲಮ್ಮ (ದಸರಾ) ಜಾತ್ರೆಯು ಅಕ್ಟೋಬರ್ 2 ರಿಂದ 12 ರವರೆಗೆ ಜರುಗಲಿದೆ. ಜಾತ್ರೆಯೆ ಪ್ರಯುಕ್ತ ಪ್ರಯಾಣಿಕರಿಗೆ ಅನುಕೂಲವಾಗಲು ಬೆಳಗಾವಿಯ ವಿಭಾಗದ ವಾಕರಸಾ ಸಂಸ್ಥೆಯಿಂದ ಬೆಳಗಾವಿ ಕೇಂದ್ರ, ನಗರ ಬಸ್ ನಿಲ್ದಾಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿಶೇಷ ಬಸ್ಸುಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ ಎಂದು ಬೆಳಗಾವಿ ವಿಭಾಗದ ವಾಕರಸಾ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.