ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನ್ಯಾಯಾಲಯ ಇಂದು ಮಹತ್ವದ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 25ರ ಬುಧವಾರ ಕಾಂಗ್ರೆಸ್ ಪಕ್ಷದ ಸಭೆ ನಡೆಯಲಿದೆ ಎಂಬ ವದಂತಿ ಹಬ್ಬಿತ್ತು. ಈ ಬಗ್ಗೆ ಕೊನೆಗೂ ಕಾಂಗ್ರೆಸ್ ಪಕ್ಷ ಸ್ಪಷ್ಟನೆ ನೀಡಿದೆ.
ಅಶೋಕ ಪಟ್ಟಣ ಸ್ಪಷ್ಟನೆ ಏನು ?
ಕೆಲವು ಮಾಧ್ಯಮಗಳಲ್ಲಿ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎನ್ನುವ ಸುದ್ದಿ ಪ್ರಸಾರ ಆಗುತ್ತಿದೆ. ಆ ರೀತಿಯ ಚರ್ಚೆಯೇ ನಮ್ಮಲ್ಲಿ ನಡೆದಿಲ್ಲ. ಶಾಸಕಾಂಗ ಸಭೆ ಕರೆದಿದ್ದೇವೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದ್ದು.
-ಅಶೋಕ್ ಪಟ್ಟಣ್
ಮುಖ್ಯ ಸಚೇತಕರು
ಕರ್ನಾಟಕ ವಿಧಾನಸಭೆ