2005 ರಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ನೆರೆಹಾವಳಿ ಉಂಟಾಗಿದ್ದನ್ನು ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ ತಾಲೂಕುಗಳ ಜನರು ಇಂದಿಗೂ ದುಸ್ವಪ್ನದಂತೆ ನೆನೆಸಿಕೊಳ್ಳುತ್ತಾರೆ.
ಕಳೆದ ರವಿವಾರ ಅಥಣಿ ತಾಲೂಕಿನ ಜುಗುಳ ಗ್ರಾಮಕ್ಕೆ ಹೋದಾಗ ಶಾಲಿನಿ ರಜನೀಶ ಅವರು 2005 ರಲ್ಲಿ ಕೈಕೊಂಡ ಪರಿಹಾರ ಕಾರ್ಯಗಳನ್ನು ನೆನಪಿಸಿಕೊಂಡರಲ್ಲದೇ ಕೃಷ್ಣಾ ನದಿಯನ್ನು ದಾಟಲು ಒದಗಿಸಿದ್ದ , ಈಗ ಹಾಳಾಗಿರುವ,ದೋಣಿಯನ್ನೂ ತೋರಿಸಿದರು.
ಶಾಲಿನಿ ರಜನೀಶ ಅವರು ಬೆಳಗಾವಿ ಜಿಲ್ಲಾಧಿಕಾರಿ, ಹಿರಿಯ ಐ ಎ ಎಸ್ ಅಧಿಕಾರಿ ಉಮೇಶ ಅಭಿವೃದ್ಧಿ ಆಯುಕ್ತರು, ಹೇಮಂತ ನಿಂಬಾಳ್ಕರ್ ಎಸ್.ಪಿ., ಶಿವಾನಂದ ಜಾಮದಾರ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ.
ಅಂದಿನ ನೆರೆಹಾವಳಿಯ ಪರಿಹಾರ ಕಾರ್ಯದಲ್ಲಿ ಸ್ವತಃ ಮುನ್ನುಗ್ಗಿದ ಶಾಲಿನಿ ರಜನೀಶ ಅವರು ತಾವೇ ಸುರಕ್ಷಾ ಜಾಕೆಟ್ ಧರಿಸಿ ದೋಣಿಯೇರಿ ಕುಳಿತರು.ನೀರಿಗೂ ಇಳಿದರು ಎಂದು ಅಥಣಿಯ ಜನರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.” ಅವರು ಒಂದು ದೋಣಿಯನ್ನು ಒದಗಿಸಿದ ನಂತರ ಮತ್ತೆ ಯಾರೂ ನಮಗೆ ದೋಣಿ ಕೊಡಲಿಲ್ಲ.ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾ ಪರಿಷತ್ತಿನ ದೋಣಿಯಲ್ಲಿಯೇ ನಾವು ಕೃಷ್ಣಾ ನದಿಯನ್ನು ದಾಟುತ್ತಿದ್ದೇವೆ” ಎಂದೂ ಹೇಳುತ್ತಾರೆ.
ದಿ.ಎಮ್.ಪಿ.ಪ್ರಕಾಶ ಅವರು ಧರ್ಮಸಿಂಗ್ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದರು.ನೆರೆಯ ಕಾಲಕ್ಕೆ ಬೆಳಗಾವಿಗೆ ಬಂದು ಅಧಿಕಾರಿಗಳ ಸಭೆ ನಡೆಸಿದ್ದರು.
( ಅಶೋಕ ಚಂದರಗಿ)