ಭೂಮಿ ಅಗೆಯುವಾಗ ನಿಧಿ ಸಿಕ್ಕ ಕೆಲ ಉದಾಹರಣೆಗಳಿವೆ. ಹಳೇ ಕಾಲದಲ್ಲಿ ಹುದುಗಿಟ್ಟ ಚಿನ್ನ ಸೇರಿದಂತೆ ಅಮೂಲ್ಯ ವಸ್ತುಗಳ ಭಂಡಾರ ಸಿಕ್ಕಿ ಜಾಕ್ಪಾಟ್ ಘಟನೆಗಳು ಕೆಲವೆಡೆ ನಡೆದಿದೆ. ಹೀಗೆ ಭೂಮಿ ಅಗೆಯುತ್ತಿದಾಗ ಪಾತ್ರೆಯೊಂದು ಕಂಡಾಗ ಮತ್ತಷ್ಟು ಅಗೆಯಲಾಗಿದೆ. ಬಳಿಕ ಈ ಪಾತ್ರೆಯನ್ನು ಹೊರತೆಗಾದಾಗ ಮುರಿದ ಮುಚ್ಚಳದ ನಡುವೆ ಚಿನ್ನದ ವಸ್ತುಗಳು ಪತ್ತೆಯಾಗಿದೆ. ಆದರೆ ಮಣ್ಣು ಕೊಡವಿ ಚಿನ್ನ ಹೊರತೆಗೆಯುವ ಪ್ರಯತ್ನದಲ್ಲಿರುವಾಗ ಪಾತ್ರೆಯೊಳಗಿಂದ ಹಾವು ಪ್ರತ್ಯಕ್ಷವಾಗಿದೆ.
ಈ ಕುರಿತ ವಿಡಿಯೋ ಒಂದು ವೈರಲ್ ಆಗಿದೆ. ಬೇರೆ ಕಾರಣಕ್ಕೆ ಭೂಮಿ ಅಗೆಯಲಾಗಿದೆ. ಈ ವೇಳೆ ಪಾತ್ರೆಯೊಂದು ಪತ್ತೆಯಾಗಿದೆ. ಹೀಗಾಗಿ ಮತ್ತಷ್ಟು ಅಗೆದು ಈ ಪಾತ್ರೆ ಹೊರತೆಗೆಯುವ ಪ್ರಯತ್ನ ನಡೆಸಲಾಗಿದೆ. ಪಾತ್ರೆ ಮೇಲೆ ಮೆತ್ತಿಕೊಂಡಿದ್ದ ಮಣ್ಣನ್ನು ತೆಗೆಯುತ್ತಿದ್ದಂತೆ ಪಾತ್ರೆಯೊಳೆಗೆ ಚಿನ್ನ ಪತ್ತೆಯಾಗಿದೆ. ತ್ರಿಶೂಲ ರೀತಿ ಚಿನ್ನದ ವಸ್ತು, ಚಿನ್ನದ ಉಂಡೆ ಹಾಗೂ ಚಿನ್ನದ ಉಂಗುರು ಈ ಪಾತ್ರೆಯೊಳಗೆ ಪತ್ತೆಯಾಗಿದೆ.ಚಿನ್ನದ ವಸ್ತುಗಳನ್ನು ಹೊರತೆಗೆಯುವ ಪ್ರಯತ್ನದಲ್ಲಿರುವಾಗ ಚಿನ್ನ ಪಾತ್ರೆಯೊಳಗಿಂದ ನಾಗರ ಹಾವು ಪ್ರತ್ಯಕ್ಷವಾಗಿದೆ. ಕೈಯಲ್ಲಿ ಹಿಡಿದಿದ್ದ ಪಾತ್ರೆಯನ್ನು ಬಿಸಾಡಿದ ಆತ, ಬಳಿಕ ಮೆಲ್ಲನೆ ಚಿನ್ನವನ್ನು ಹೊರತೆಗೆಯುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ನಾಗರ ಹಾವು ಈ ಪಾತ್ರೆಯೊಳಗಿಂದ ಹೊರಬಂದಿದೆ. ಸುದೀರ್ಘ ವರ್ಷಗಳ ಕಾಲ ಚಿನ್ನಕ್ಕೆ ಕಾವಾಲಾಗಿದ್ದ ನಾಗರ ಹಾವು ಚಿನ್ನ ಹೊರತೆಗೆಯುತ್ತಿದ್ದಂತೆ ಹೊರ ನಡೆದಿದೆ.
ಪಾತ್ರೆಯಿಂದ ಹೊರಬಂದ ನಾಗರ ಹಾವು ಬಳಿಕ ಮೆಲ್ಲನೆ ಅಲ್ಲಿಂದ ಸರಿದಿದೆ. ಹಾವು ಸರಿಯುತ್ತಿದ್ದಂತೆ ಈತ, ಚಿನ್ನದ ವಸ್ತುಗಳಿಗೆ ಅಂಟಿದ್ದ ಮಣ್ಣು ತೆಗೆದಿದ್ದಾನೆ. ಉಂಗುರವನ್ನು ಧರಿಸಿ ನೋಡಿದ್ದಾನೆ. ಭೂಮಿ ಅಗೆಯಲು ಹೋಗಿ ಚಿನ್ನದ ನಿಧಿಯನ್ನೇ ಸಂಪಾದಿಸಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗಿದೆ.
ಈ ವಿಡಿಯೋಗೆ ಭರ್ಜರಿ ಕಮೆಂಟ್ ವ್ಯಕ್ತವಾಗಿದೆ. ಹಲವು ಜಾಕ್ಪಾಟ್ ಎಂದರೆ ಮತ್ತೆ ಕೆಲವರು ಇದು ನೈಜ ಘಟನೆಯಂತೆ ಕಾಣುತ್ತಿಲ್ಲ. ನಕಲಿ ಸೃಷ್ಟಿಸಲಾಗಿದೆ ಎಂದು ಕಮೆಂಟ್ ಮಾಡಿದ್ದರೆ. ನಾನು ಅಗೆದಿದ್ದೇನೆ, ಆದರೆ ಯಾವುದೇ ನಿಧಿ ಸಿಕ್ಕಿಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ಪಾತ್ರೆಯೊಳಗೆ ಪತ್ತೆಯಾಗಿರುವುದಲ್ಲಿ ಚಿನ್ನದ ರೀತಿ ಉಂಗುರ ಮಾತ್ರ ಕಾಣಿಸುತ್ತಿದೆ. ಇದು ವೈರಲ್ ವಿಡಿಯೋ ಮಾಡಲು ಸೃಷ್ಟಿಸಲಾದ ಕತೆ, ಅಸಲಿಯಲ್ಲ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.