ಬೆಂಗಳೂರು : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ‘ಪರೀಕ್ಷೆ-3’ಗೆ ಒಟ್ಟು 75,995 ವಿದ್ಯಾರ್ಥಿ ಗಳು ನೋಂದಾಯಿಸಿಕೊಂಡಿದ್ದು, ಜೂನ್ 24ರಿಂದ ಜು.7ರವರೆಗೆ ಸುಸೂತ್ರವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.
ನೋಂದಾಯಿಸಿರುವವರಲ್ಲಿ 44,358 ಬಾಲಕರು ಮತ್ತು 31,637 ಬಾಲಕಿಯರಾಗಿ ದ್ದಾರೆ. ಒಟ್ಟು 248 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ. ಎಲ್ಲ ಕೇಂದ್ರಗಳಲ್ಲಿಯೂ
ಸಿಸಿಟಿವಿ ಅಳವಡಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ವಿಚಕ್ಷಣ ದಳಗಳನ್ನು ರಚಿಸಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು 2ರಲ್ಲಿ ಅನುತ್ತೀರ್ಣ ಹಾಗೂ ಫಲಿತಾಂಶ ಸುಧಾರಣೆ ಬಯಸುವ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳು ಬರೆಯಲಿದ್ದಾರೆ. ಖಾಸಗಿ ಪರೀಕ್ಷೆ
ಪರೀಕ್ಷೆಗೆ ಕಲಾ ವಿಭಾಗ ದಿಂದ30,811 ಅಭ್ಯರ್ಥಿಗಳು, ವಿಜ್ಞಾನ ವಿಭಾಗದಿಂದ 19,783 ಮತ್ತು ವಾಣಿಜ್ಯ ವಿಭಾಗದಿಂದ 25,801 ಅಭ್ಯರ್ಥಿ ಗಳು ನೋಂದಾಯಿಸಿದ್ದಾರೆ ಮಂಡಳಿ ತಿಳಿಸಿದೆ.