ದೆಹಲಿ : ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಮತ್ತು ಕಾಂಗ್ರೆಸ್ ವಾರ್ ರೂಮ್ ಮುಖ್ಯಸ್ಥ ಸಸಿಕಾಂತ್ ಸೆಂಥಿಲ್ ಇದೀಗ ತಮಿಳುನಾಡಿನಿಂದ ಲೋಕಸಭೆಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ದಲಿತ ಸಮುದಾಯಕ್ಕೆ ಸೇರಿರುವ ಕರ್ನಾಟಕ ಕೇಡರ್ ನ ಸಸಿಕಾಂತ್ ಸೆಂಥಿಲ್ ಮಾಜಿ ಐಎಎಸ್ ಅಧಿಕಾರಿ. ಅವರು ಇದೀಗ ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದಿಂದ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಯಲು ಮುಂದಾಗುತ್ತಿದ್ದಾರೆ. ಕಾಂಗ್ರೆಸ್ ನಿನ್ನೆ ಪ್ರಕಟಿಸಿದ ಪಟ್ಟಿಯಲ್ಲಿ ಅವರ ಹೆಸರು ಸೇರಿದೆ.