ಬೆಳಗಾವಿ :
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಾಧನೆ ಯೋಜನೆಯಡಿ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಸಾಧನೆ ಮಾಡಿದ ವಿಕಲಚೇತನ ವ್ಯಕ್ತಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು, ಸದರಿ ಯೋಜನೆಯಡಿ ಅರ್ಜಿ ಸಲ್ಲಿಸುವ ಜಿಲ್ಲೆಯ ವಿಕಲಚೇತನ ವ್ಯಕ್ತಿಗಳು ರಾಜ್ಯ/ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ಕ್ರೀಡಾ ಆಯೋಜಕರಿಂದ (ಸ್ಪೋರ್ಟ್ಸ ಫೆಡರೇಶನ್) ಬಂದಿರುವ ಕರೆ ಪತ್ರದೊಂದಿಗೆ ೪೫ ದಿನ ಮುಂಚಿತವಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೋಗುತ್ತಿರುವ ಬಗ್ಗೆ ಜಿಲ್ಲಾ ಕಛೇರಿಗೆ ಮಾಹಿತಿ ಪತ್ರವನ್ನು ಸಲ್ಲಿಸುವುದು ಯೋಜನೆಯ ನಿಯಮಾನುಸಾರ ಕಡ್ಡಾಯವಾಗಿರುತ್ತದೆ.
ಜಿಲ್ಲೆಯ ವಿಕಲಚೇತನರು ರಾಜ್ಯ/ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಹೋಗುತ್ತಿರುವ ಬಗ್ಗೆ ೪೫ ದಿನ ಮುಂಚಿತವಾಗಿ ಜಿಲ್ಲಾ ಕಛೇರಿಗೆ ಮಾಹಿತಿ ಪತ್ರವನ್ನು ಸಲ್ಲಿಸುವಂತೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ದೂರವಾಣಿ ಸಂಖ್ಯೆ: ೦೮೩೧-೨೪೭೬೦೬೯೬/೭ ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.