ಬೆಳಗಾವಿ : ಜಿಲ್ಲೆಯ ಎಲ್ಲಾ ಅಡುಗೆ ಅನಿಲ ಸಿಲಿಂಡರ್ ಬಳಸುವ ಗ್ರಾಹಕರಿಗೆ ಇದೊಂದು ಮಹತ್ವದ ಸೂಚನೆ. ಅಡುಗೆ ಅನಿಲದ ಸಿಲಿಂಡರನ್ನು ಮನೆಗೆ ಸರಬರಾಜು ಮಾಡುವ ಡೆಲಿವರಿ ಹುಡುಗರಿಗೆ ಗ್ರಾಹಕರು ಡೆಲಿವರಿಗೆ ಶುಲ್ಕ ನೀಡುವ ಅಗತ್ಯವಿಲ್ಲ. ಬಿಲ್ಲಿನಲ್ಲಿ ನಮೂದಿಸಿರುವ ಮೊತ್ತವನ್ನು ಮಾತ್ರ ನೀಡುವಂತೆ ತಿಳಿಸಿದೆ.
ಗ್ಯಾಸ್ ಏಜನ್ಸಿಗಳು ಗೃಹ ಬಳಕೆಯ ಅನಿಲ ಸಿಲಿಂಡರನ್ನು ನೇರವಾಗಿ ಗೋದಾಮಿನಿಂದ ಗ್ರಾಹಕರಿಗೆ ಸರಬರಾಜು ಮಾಡತಕ್ಕದ್ದು, ಯಾವುದೇ ಕಾರಣಕ್ಕಾಗಿಯೂ ಅನಿಲ ಸಿಲಿಂಡರನ್ನು ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ, ಮೈದಾನಗಳಲ್ಲಿ ಇಟ್ಟು ಮಾರಾಟ ಮಾಡತಕ್ಕದ್ದಲ್ಲ. ಸರ್ಕಾರದ ಆದೇಶದಂತೆ ಗೃಹೊಪಯೋಗಿ ಗ್ಯಾಸ್ ಸಿಲಿಂಡರ್ ಳಿಗೆ ನಾಗರಿಕ ತಿದ್ದುಪಡಿಯಲ್ಲಿ ನಿಗದಿಪಡಿಸಲಾಗಿದೆ.
ಸಿಲಿಂಡರ್ನ್ನು ಮನೆಗೆ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಬಿಲ್ಲಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರ ಕಚೇರಿ ಕಾರ್ಯಾಲಯಕ್ಕೆ ಅಥವಾ ಕಛೇರಿಯ ದೂರವಾಣಿ ಸಂಖ್ಯೆ
0831-2407282ಗೆ ಹಾಗೂ ಆಯಾ ತಾಲೂಕಿನ ತಹಶೀಲ್ದಾರರ ಕಛೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಬಹುದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


