ಶಬರಿಮಲೆ : ದೇಶದ ಅತ್ಯಂತ ದೊಡ್ಡ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೇರಳ ರಾಜ್ಯದ ಶಬರಿಮಲೆಯಲ್ಲಿ ಪವಿತ್ರ ಮಕರ ಸಂಕ್ರಮಣದಂದು ಗೋಚರವಾಗುವ ಮಕರ ಜ್ಯೋತಿಯನ್ನು ಕಣ್ಣುಂಬಿಕೊಳ್ಳಲು ಶಬರಿಮಲೆಗೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ನೂಕುನುಗ್ಗಲು ತಪ್ಪಿಸುವ ನಿಟ್ಟಿನಲ್ಲಿ ಸನ್ನಿಧಾನಂನಲ್ಲಿ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ನಾಳೆಯಿಂದ ಜ.15ರ ವರೆಗೆ ದಿನಕ್ಕೆ 5000 ಜನರಿಗೆ ಸೀಮಿತಗೊಳಿಸಲಾಗಿದೆ. ದೇವಸ್ವಂ ಬೋರ್ಡ್ ವೆಬ್ಸೈಟ್ನಲ್ಲಿ ಜ.12 ರಂದು 60,000, ಜ.13 ರಂದು 50,000, ಜ14 ರಂದು 40,000 ವರ್ಚುಯಲ್ ಸರದಿಯ ಮೂಲಕ ಬುಕ್ಕಿಂಗ್ ನಿಗದಿಪಡಿಸಲಾಗಿದೆ. ಮಕರ ಜ್ಯೋತಿ ದಿನ ಬೆಟ್ಟದ ಮೇಲೆ ಬಿಡಾರ ಹೂಡದಂತೆ ಭಕ್ತರಿಗೆ ಸಲಹೆ ನೀಡಲಾಗಿದೆ.
ಶಬರಿಮಲೆಯಲ್ಲಿ ವರ್ಷದಿಂದ ವರ್ಷಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ದೇವರ ದರ್ಶನಕ್ಕೆ ತೆರಳುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.