ಬೆಂಗಳೂರು: ರಾಜ್ಯದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳು ಆಗಾಗ ನೀರು ಕುಡಿಯಲು ಜ್ಞಾಪಿಸಲು ‘ನೀರಿನ ಗಂಟೆ’ (ವಾಟರ್ಬೆಲ್) ಬಾರಿಸುವ ನಿಯಮ ಜಾರಿ ಪೋಷಣ್ ಗೊಳಿಸುವಂತೆ ಪಿಎಂ ಶಕ್ತಿ ನಿರ್ಮಾಣ್ನ ನಿರ್ದೇಶಕರು ಎಲ್ಲ ಶಾಲೆಗಳಿಗೆ ಸೂಚಿಸಿದ್ದಾರೆ.
2022 ರಲ್ಲೇ ನಿಯಮ ಜಾರಿಗೆ ಬಂದಿ ದ್ದರೂ ಸರಿಯಾಗಿ ಪಾಲನೆಯಾಗದ ಹಿನ್ನೆಲೆ ವಾಟರ್ಬೆಲ್ ನಿಯಮ ಜಾರಿಗೆ ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಇಲಾಖೆಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದರು. ಈ ಹಿನ್ನೆಲೆ ಎಲ್ ಕೆಜಿ, ಯುಕೆಜಿ ಮಕ್ಕಳು ಸೇರಿ ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ಮಕ್ಕಳಿಗೆ ವಾಟರ್ಬೆಲ್ ನಿಯಮ ಜಾರಿ ಗೊಳಿಸುವಂತೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ. ಬೆಳಗ್ಗೆ 10.35ಕ್ಕೆ, ಮಧ್ಯಾಹ್ನ 12ಕ್ಕೆ ಮತ್ತು 2 ಗಂಟೆ ವಾಟರ್ಬೆಲ್ ಬಾರಿಸಲಾಗುತ್ತದೆ.


