ಬೆಳಗಾವಿ : ಹೊರಗೆ ಹೋದವರು ಮನೆಗೆ ಮರಳುವಾಗ ದಾರಿ ಗೊತ್ತಾಗದೆ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಕಬ್ಬೂರ ಪಟ್ಟಣದ ಹೊರವಲಯದಲ್ಲಿ ಬೆಳಕಿಗೆ ಬಂದಿದೆ. ಮೃತಪಟ್ಟವರು ದುಂಡಪ್ಪ ಕಾರತಗಿ (32) ಮಾನಸಿಕ ಅಸ್ವಸ್ಥರಾಗಿದ್ದಾರೆ. ಗುರುವಾರ ರಾತ್ರಿ ಹೊರಗಡೆ ಹೋಗಿದ್ದರು. ಆದರೆ, ಮನೆಗೆ ಮರಳುವಾಗ ದಾರಿ ಗೊತ್ತಾಗದೆ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.