ಬೆಳಗಾವಿ : ಇಲ್ಲಿಯ ನಿಯತಿ ಸಹಕಾರ ಸಂಘ, ಲಿಮಿಟೆಡ್ ಇದರ ನಾಲ್ಕನೇ ವಾರ್ಷಿಕ ಮಹಾಸಭೆ ನಗರದ ಹೋಟೆಲ್ ಮಧುಬನ್ ಸಭಾಂಗಣದಲ್ಲಿ ನಡೆಯಿತು.
ಸೊಸೈಟಿ ಅಧ್ಯಕ್ಷೆ ಹಾಗೂ ಸಂಸ್ಥಾಪಕಿ ಡಾ. ಸೋನಾಲಿ ಸರ್ನೋಬತ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೊಸೈಟಿಯನ್ನು ವಿಸ್ತರಿಸುವ ಕುರಿತು ತಮ್ಮ ವಿಚಾರವನ್ನು ಹಂಚಿಕೊಂಡರು.
ಖ್ಯಾತ ಉದ್ಯಮಿ ಹಾಗೂ ಲೇಖಕ ಆನಂದ್ ಗೋಗಟೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರು.
ಆಯವ್ಯಯ ಪತ್ರವನ್ನು ನಿರ್ದೇಶಕ ಗಜಾನನ ರಾಮನಕಟ್ಟಿ ವಾಚಿಸಿದರು. ಸೊಸೈಟಿಯ ಇತರ ಮಾಹಿತಿಯನ್ನು ಹಿರಿಯ ವ್ಯವಸ್ಥಾಪಕಿ ಅನುಷಾ ಜೋಶಿ ಹಂಚಿಕೊಂಡರು. 2024-25 ರ ಆರ್ಥಿಕ ವರ್ಷದ ಬಜೆಟ್ ಅನ್ನು ವ್ಯವಸ್ಥಾಪಕಿ ದೀಪಾ ಪ್ರಭುದೇಸಾಯಿ ಮಂಡಿಸಿದರು.
ಹಿರಿಯ ಸಲಹೆಗಾರರಾದ ವಿಜಯ ಮೋರೆ ಮತ್ತು ರುದ್ರಗೌಡ ಪಾಟೀಲ ಅವರು ಭವಿಷ್ಯದ ಯೋಜನೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ವರದಾ ಹಪ್ಪಳಿ ಸ್ವಾಗತಿಸಿ, ಪರಿಚಯಿಸಿದರು. ನಿರ್ದೇಶಕ ಭೂಷಣ್ ರೇವಣಕರ ವಂದಿಸಿದರು. ಕಿಶೋರ ಕಾಕಡೆ ನಿರೂಪಿಸಿದರು.

ನಿಯತಿ ಸೊಸೈಟಿ ವಾರ್ಷಿಕ ಸಾಮಾನ್ಯ ಸಭೆ ಸಂಪನ್ನ
