ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಂಗಳವಾರ ಔಪಚಾರಿಕವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಸೋಮವಾರದಂದು ನಡೆಯಬೇಕಾಗಿದ್ದ ಚುನಾವಣೆಗೆ ನಿತಿನ್ ನಬಿನ್ ಅವರೊಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಹಾರದ ನಾಯಕ ನಿತಿನ್ ನಬಿನ್ ಅವರು ಜೆ.ಪಿ.ನಡ್ಡಾ ಅವರಿಂದ ಪಕ್ಷದ ಹುದ್ದೆ ವಹಿಸಿಕೊಳ್ಳಲಿದ್ದಾರೆ.
46 ರ ಹರೆಯದ ನಿತಿನ್ 2025 ಡಿಸೆಂಬರ್ ನಲ್ಲಿ ಬಿಜೆಪಿ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರಕಾರದಲ್ಲಿ 2024 ರಿಂದ 2025 ರವರೆಗೆ ರಸ್ತೆ ನಿರ್ಮಾಣ ಸಚಿವರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಪ್ರಸ್ತುತ ಅವರು ಬಿಹಾರ ವಿಧಾನಸಭೆಯ ಬಂಕಿಪುರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೀಲಿಗಣ್ಣಿನ ಹುಡುಗ ಎಂದೇ ನಿತಿನ್ ನಬಿನ್ ಗುರುತಿಸಿಕೊಂಡಿದ್ದಾರೆ. ನಿತಿನ್ ಅವರ ಅತ್ಯಂತ ಚುರುಕಿನ ಕೆಲಸಕಾರ್ಯಗಳನ್ನು ಗುರುತಿಸಿರುವ ಅಮಿತ್ ಷಾ ಅವರು ಇದೀಗ ಯುವಕನಿಗೆ ಕಮಲ ಪಕ್ಷದ ಸಾರಥ್ಯವನ್ನು ನೀಡಿರುವುದು ವಿಶೇಷವಾಗಿದೆ.


