ಬೆಳಗಾವಿ :
ಸಿಎಂ ಸಿದ್ದರಾಮಯ್ಯ ಅವರನ್ನು ರಾಜ್ಯದ ಜನ ಎರಡು ಬಾರಿ ಸಿಎಂ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ರಾಜಕೀಯವಾಗಿ ಸಮಾಜ ಬಲಿಷ್ಠ ಆಗಬೇಕು ಎನ್ನುವ ಉದ್ದೇಶದೊಂದಿಗೆ ಇಂದು ಬೆಳಗಾವಿಯಲ್ಲಿ ಕುರುಬರ ಸಮಾವೇಶ ನಡೆಸಲಾಗಿದೆ. ಮುಂದಿನ ಸಮಾವೇಶ ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ದೇವರಾಜು ಅರಸು ನಂತರ ಅಹಿಂದ ಪ್ರಮುಖ ನಾಯಕ ಸಿದ್ದರಾಮಯ್ಯ. ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು ಮುಖ್ಯ. ಪ್ರತಿ ಬಡವನ ಮನೆಗೆ ಅನ್ನ ದೇವರನ್ನು ಕಳಿಸಿದ್ದು ಸಿದ್ದರಾಮಯ್ಯ ಅವರ ಹೆಗ್ಗಳಿಕೆ ಎಂದು ಹಾಡಿ ಹೊಗಳಿದರು.
ಇಡೀ ದೇಶದ 12 ಕೋಟಿ ಕುರುಬ ಸಮುದಾಯದವನ್ನು ಒಂದೇ ವೇದಿಕೆ ತರೋದು ಶಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ನ ಉದ್ದೇಶ.
ಮುಂದಿನ ಶೆಫರ್ಡ್ಸ್ ಇಂಡಿಯಾ ಇಂಟರ್ನ್ಯಾಷನಲ್ ಸಮಾವೇಶ ದೆಹಲಿಯಲ್ಲಿ ನಡೆಯಲಿದೆ. ನಾವೆಲ್ಲ
ದೆಹಲಿಯ ರಾಮಲೀಲಾ ಮೈದಾನದಲ್ಲಿ ಭೇಟಿಯಾಗೋಣ ಎಂದರು.